Nvidia CEO ಜೆನ್ಸನ್ ಹುವಾಂಗ್ ರಾಜೀನಾಮೆ
ಕೊಲೆಟ್ ಕ್ರೆಸ್ ಗೆ ಮಧ್ಯಂತರ ಹೊಣೆ; ರಾಜೀನಾಮೆ ಬೆನ್ನಲ್ಲೇ ಪ್ರಿಮಾರ್ಕೆಟ್ ವಹಿವಾಟಿನಲ್ಲಿ ಕಂಪೆನಿಯ ಷೇರುಗಳ ಮೌಲ್ಯ ಶೇ. 10ರಷ್ಟು ಕುಸಿತ

Photo Credit | AP
ಹಾಂಗ್ ಕಾಂಗ್, ನ.12: ವಿವಾಹೇತರ ಸಂಬಂಧದ ವಿವಾದ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಕಳವಳಗಳ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪೆನಿಗಳಲ್ಲೊಂದಾದ Nvidia ಸಿಇಒ ಜೆನ್ಸನ್ ಹುವಾಂಗ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ.
ಚೀನಾದ ಗೂಢಚಾರರೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಹುವಾಂಗ್ ರಾಜೀನಾಮೆ ನೀಡಬೇಕೆಂಬ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ, ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ Nvidia ಉದ್ಯೋಗಿಯೊಬ್ಬರೊಂದಿಗೂ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಮತ್ತೊಂದು ಆರೋಪ ಬುಧವಾರ ತಡರಾತ್ರಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದೇ ವೇಳೆ, ನಿರ್ದೇಶಕರ ಮಂಡಳಿಯು ಗುರುವಾರ ತನ್ನ ಮೊದಲ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಹೂಡಿಕೆದಾರ ಹಾರ್ವೆ ಸಿ. ಜೋನ್ಸ್ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ.
ಹುವಾಂಗ್ ರಾಜೀನಾಮೆಯ ಬೆನ್ನಲ್ಲೇ Nvidia ಷೇರುಗಳ ಮೌಲ್ಯದಲ್ಲೂ ಭಾರಿ ಕುಸಿತ ಕಂಡುಬಂದಿದೆ. ಗುರುವಾರದ ಮಾರುಕಟ್ಟೆ ವಹಿವಾಟು ಆರಂಭಕ್ಕೂ ಮುನ್ನದ ವಹಿವಾಟಿನಲ್ಲಿ ಕಂಪೆನಿಯ ಷೇರುಗಳು ಶೇ. 10ರಷ್ಟು ಕುಸಿದವು.
ಚೀನಾದ ಸರ್ಕಾರಿ ಏಜೆಂಟ್ ಎಂದು ಶಂಕಿಸಲಾಗಿರುವ ಮಾಜಿ ಮೆಗಾಸ್ಪೀಡ್ ಕಾರ್ಯನಿರ್ವಾಹಕರೊಬ್ಬರೊಂದಿಗೆ ಹುವಾಂಗ್ ಸಂಪರ್ಕ ಹೊಂದಿದ್ದಾರೆಂಬ ಮಾಹಿತಿ ಬಹಿರಂಗವಾದ ಬಳಿಕ, ಅವರ ಭವಿಷ್ಯದ ಕುರಿತು ಚರ್ಚಿಸಲು Nvidia ನಿರ್ದೇಶಕರ ಮಂಡಳಿ ಸಭೆ ಸೇರಿತ್ತು.
ಹುವಾಂಗ್ ಅವರಿಗೆ ವರದಿ ಮಾಡುತ್ತಿದ್ದ Nvidia ಕಾರ್ಯನಿರ್ವಾಹಕರೊಬ್ಬರೊಂದಿಗೂ ಅವರು ಸಂಬಂಧ ಹೊಂದಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಬುಧವಾರ ವರದಿ ಮಾಡಿತ್ತು.






