ಒಮಾನಿನ ಮುಸಂದಮ್ ಕರಾವಳಿಯ ಬಳಿ ನೌಕೆ ಮೇಲೆ ದಾಳಿ; 25 ಸಿಬ್ಬಂದಿಯ ರಕ್ಷಣೆ

Photo Credit : reuters.com
ಮುಸಂದಮ್: ಒಮಾನ್ ನ ಉತ್ತರದ ಪ್ರಾಂತ್ಯವಾದ ಮುಸಂದಮ್ ಕರಾವಳಿಯಿಂದ 106 ನಾಟಿಕಲ್ ಮೈಲಿ (196 ಕಿ.ಮೀ.) ದೂರದಲ್ಲಿ ದಾಳಿಗೀಡಾಗಿ ಬೆಂಕಿ ಹೊತ್ತಿಕೊಂಡಿದ್ದ ನೌಕೆಯಲ್ಲಿನ 25 ಸಿಬ್ಬಂದಿಯನ್ನು ಒಮಾನ್ ನೌಕಾಪಡೆ ರಕ್ಷಿಸಿದೆ ಎಂದು Aljazeera ವರದಿ ಮಾಡಿದೆ.
ಪನಾಮದ ಧ್ವಜ ಹೊಂದಿದ್ದ ಈ ನೌಕೆಯಲ್ಲಿ ದಾಳಿಯ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು ಎಂದು ಒಮಾನ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ನೌಕೆಯಿಂದ ಸುರಕ್ಷಿತವಾಗಿ ಹೊರತರಲಾದ ಎಲ್ಲ 25 ಸಿಬ್ಬಂದಿಗೂ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.
Next Story




