ಗಾಝಾದಲ್ಲಿ ದಿನಕ್ಕೊಂದು ಮಗುವಿನ ಹತ್ಯೆ: ಯುನಿಸೆಫ್

Photo Credit : unicef.org
ಪ್ಯಾರಿಸ್, ಆ. 6: 2025ರ ಅಕ್ಟೋಬರ್ 10ರಂದು ತಥಾಕಥಿತ ಕದನ ವಿರಾಮ ಘೋಷಣೆಯಾದ ನಂತರದ ಸುಮಾರು 300 ದಿನಗಳಲ್ಲಿ ಗಾಝಾದಲ್ಲಿ ಕನಿಷ್ಠ 300 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ (ಯುನಿಸೆಫ್) ತಿಳಿಸಿದೆ. ಅಂದರೆ, ದಿನಕ್ಕೆ ಸರಾಸರಿ ಒಂದು ಮಗು ಮೃತಪಟ್ಟಿದೆ. ಇದೇ ಅವಧಿಯಲ್ಲಿ ನೂರಾರು ಮಕ್ಕಳು ಗಾಯಗೊಂಡಿದ್ದಾರೆ ಹಾಗೂ ಅ ಪೈಕಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಯುನಿಸೆಫ್ ತಿಳಿಸಿದೆ. ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಸ್ತಾವಿತ ಅಮೆರಿಕ ನೇತೃತ್ವದ ಶಾಂತಿ ಯೋಜನೆಯಲ್ಲಿ ಕೈಜೋಡಿಸುವಂತೆ ಅದು ಸಂಬಂಧಪಟ್ಟ ಪಕ್ಷಗಳನ್ನು ಒತ್ತಾಯಿಸಿದೆ.
Next Story




