ಹಾರ್ಮುಝ್ ನಲ್ಲಿ ಇರಾನ್ನ ವಾಣಿಜ್ಯ ಹಡಗಿಗೆ ಬಡಿದ ಅಪರಿಚಿತ ಪ್ರಕ್ಷೇಪಕ ಕ್ಷಿಪಣಿ : ಓರ್ವ ಮೃತ್ಯು, ಮೂವರಿಗೆ ಗಾಯ

ಸಾಂದರ್ಭಿಕ ಚಿತ್ರ | PTI
ಟೆಹರಾನ್: ದಕ್ಷಿಣ ಇರಾನ್ನಲ್ಲಿ ರವಿವಾರ ಮುಂಜಾನೆ ಇರಾನ್ನ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಇರಾನ್ನ ಸರಕಾರಿ ಮಾಧ್ಯಮಗಳು ವರದಿ ಮಾಡಿದೆ.
ಬ್ರಿಟನ್ನ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಪ್ರಕಾರ, ಕ್ವೆಶ್ಮ್ ದ್ವೀಪದ ಸಮೀಪ ಹಾರ್ಮುಝ್ ಜಲಸಂಧಿ ಮೂಲಕ ಸಾಗುತ್ತಿದ್ದ ಇರಾನ್ನ ವಾಣಿಜ್ಯ ಹಡಗಿಗೆ ರವಿವಾರ ಮುಂಜಾನೆ ಅಪರಿಚಿತ ಪ್ರೊಜೆಕ್ಟೈಲ್ ಬಡಿದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
“ಹೆಂಗಮ್ ದ್ವೀಪ ಹಾಗೂ ಕ್ವೆಶ್ಮ್ ದ್ವೀಪದ ಶಿಬ್ ದೆರಾಜ್ ಕರಾವಳಿ ಪ್ರದೇಶದ ಸಮೀಪ ಮುಂಜಾನೆ 5 ಗಂಟೆ ಸುಮಾರಿಗೆ ವಾಣಿಜ್ಯ ಹಡಗಿನ ಮೇಲೆ ದಾಳಿಯಾಗಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ” ಎಂದು ಇರಾನ್ನ ಕ್ವೆಶ್ಮ್ ಕೌಂಟಿಯ ಗವರ್ನರ್ ಅಮೀರ್ ತೈಮೂರಿ ಅವರು ಹೇಳಿದ್ದಾರೆ.
Next Story




