ಹಾರ್ಮುಝ್ ಮುಕ್ತ, 300 ಶತಕೋಟಿ ಡಾಲರ್ ಆರ್ಥಿಕ ನೆರವು: ಇರಾನ್-ಅಮೆರಿಕ ಒಪ್ಪಂದದಲ್ಲೇನಿದೆ?

Photo: x.com/MarioNawfal
ಟೆಹರಾನ್: ಮೂರೂವರೆ ತಿಂಗಳಿನಿಂದ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿವೆ. 14 ಅಂಶಗಳ ತಿಳಿವಳಿಕೆ ಪತ್ರಕ್ಕೆ ಉಭಯ ಗಣ್ಯರು ಒಪ್ಪಿಕೊಂಡಿದ್ದಾರೆ.
"Islamabad Memorandum of Understanding between the United States of America and the Islamic Republic of Iran" ಶೀರ್ಷಿಕೆಯ ಒಪ್ಪಂದವನ್ನು ಕಾನ್ಫರೆನ್ಸ್ ಕರೆಯ ಮೂಲಕ ಅಂತಿಮಪಡಿಸಲಾಗಿದೆ.
ಒಪ್ಪಂದಕ್ಕೆ ಉಭಯ ಮುಖಂಡರು ಶುಕ್ರವಾರ ಸಹಿ ಮಾಡಲಿದ್ದು, ಅಂತಿಮ ಒಪ್ಪಂದದ ಷರತ್ತುಗಳನ್ನು 60 ದಿನಗಳ ಒಳಗಾಗಿ ನಿರ್ಧರಿಸಲಿದ್ದಾರೆ.
ಅಮೆರಿಕವು ಇರಾನ್ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು 30 ದಿನಗಳಲ್ಲಿ ತೆಗೆದುಹಾಕಲು ಬದ್ಧವಾಗುವುದು . ಯುದ್ಧಪೂರ್ವ ಅವಧಿಯಲ್ಲಿದ್ದಂತಹ ಸುಗಮ ಹಡಗು ಸಂಚಾರವನ್ನು ಪುನಃಸ್ಥಾಪಿಸುವುದು. ಅಂತಿಮ ಒಪ್ಪಂದವು ಮುಕ್ತಾಯಗೊಂಡ 30 ದಿನಗಳಲ್ಲಿ ಅಮೆರಿಕವು ಇರಾನ್ ಸುತ್ತಮುತ್ತಲಿನ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಎಂದು ಒಪ್ಪಂದದ ಷರತ್ತುಗಳು ಹೇಳುತ್ತದೆ.
ಜತೆಗೆ ಎಂದಿಗೂ ಅಣ್ವಸ್ತ್ರವನ್ನು ತಯಾರಿಸುವುದಿಲ್ಲ ಎಂದು ಇರಾನ್ ಭರವಸೆ ನೀಡಿದೆ.
ಈ ಒಡಂಬಡಿಕೆ ಪತ್ರದ ಅನ್ವಯ ಅಮೆರಿಕ ಇತರ ಪ್ರಾದೇಶಿಕ ಪಾಲುದಾರರ ಜತೆ ಸೇರಿ 300 ಕೋಟಿ ರೂಪಾಯಿಯ ನೆರವಿನ ಮೊತ್ತವನ್ನು ಸ್ಥಾಪಿಸಲಿದ್ದು, ಇದು ಇರಾನ್ನ ಪುನರುತ್ಥಾನ ಮತ್ತು ಆರ್ಥಿಕ ಅಭಿವೃದ್ದಿಗಳಿಗಾಗಿ ಇರುತ್ತದೆ.






