ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾ ಮೇಲೆ ಮತ್ತೆ ದಾಳಿ ನಡೆಸಿದ ಅಮೆರಿಕ

PC | timesofindia
ವಾಷಿಂಗ್ಟನ್: ಸಿರಿಯಾದ ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಶುಕ್ರವಾರ ಮೂರನೇ ಪ್ರತೀಕಾರದ ದಾಳಿ ನಡೆಸಿದೆ. ವಾಯವ್ಯ ಸಿರಿಯಾದ ಮೇಲೆ ನಡೆದ ವಾಯುದಾಳಿಯಲ್ಲಿ ಅಲ್ಖೈದಾ ಜತೆ ಸಂಪರ್ಕ ಹೊಂದಿದ್ದ ಬಿಲಾಲ್ ಹಸನ್ ಅಲ್ ಜಸೀಮ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಬಿಲಾಲ್ ಹಸನ್ ಅಲ್ ಜಸೀಮ್ ಡಿಸೆಂಬರ್ 13ರಂದು ನಡೆದ ಇಬ್ಬರು ಅಮೆರಿಕದ ಸೈನಿಕರು ಮತ್ತು ಒಬ್ಬ ನಾಗರಿಕನ ಹತ್ಯೆ ನಡೆಸಿದ ಸಂಘಟನೆ ಜತೆ ಸಂಬಂಧ ಹೊಂದಿದ್ದ ಎಂದು ಅಮೆರಿಕ ಹೇಳಿಕೊಂಡಿದೆ.
"ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ ಭಯೋತ್ಪಾದಕನ ಹತ್ಯೆ ನಮ್ಮ ಪಡೆಗಳ ಮೇಲೆ ದಾಳಿ ನಡೆಸುವವರ ಬಗೆಗಿನ ನಮ್ಮ ನಿಲುವನ್ನು ಬಿಂಬಿಸುತ್ತದೆ" ಎಂದು ಸೆಂಟ್ರಲ್ ಕಮಾಂಡ್ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿಕೆ ನೀಡಿದ್ದಾರೆ. ಅಮೆರಿಕನ್ ನಾಗರಿಕರು ಮತ್ತು ಯುದ್ಧಯೋಧರನ್ನು ಹತ್ಯೆ ಮಾಡುವವರಿಗೆ ಯಾವುದೇ ಸುರಕ್ಷಿತ ಜಾಗ ಇಲ್ಲ. ಎಲ್ಲಿದ್ದರೂ ನಾವು ಹುಡುಕುತ್ತೇವೆ" ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಆದೇಶದ ಅಂಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಹೇಳಲಾಗಿದೆ.







