ಬಾಹ್ಯಾಕಾಶದಲ್ಲಿ ಸಮಾಧಿಗೆ ಬಯಸಿದ್ದ 166 ಜನರ ಚಿತಾಭಸ್ಮ ಹೊಂದಿದ್ದ ಗಗನನೌಕೆ ಪೆಸಿಫಿಕ್ ಸಾಗರಕ್ಕೆ ಪತನ

Photo Source : X/@mcgmouton57
ಬರ್ಲಿನ್: ಬಾಹ್ಯಾಕಾಶದಲ್ಲಿ ಸಮಾಧಿ ಮಾಡಬೇಕೆಂದು ಬಯಸಿದ್ದ 166 ಜನರ ಅವಶೇಷ ಮತ್ತು ಚಿತಾಭಸ್ಮವನ್ನು ಒಯ್ದಿದ್ದ ವಿಶಿಷ್ಟ ಗಗನನೌಕೆ `ನಿಕ್ಸ್'ನ ಯೋಜನೆ ವಿಫಲಗೊಂಡಿದ್ದು ಗಗನನೌಕೆ ಫೆಸಿಫಿಕ್ ಮಹಾಸಾಗರಕ್ಕೆ ಪತನಗೊಂಡಿರುವುದಾಗಿ ವರದಿಯಾಗಿದೆ.
ಜರ್ಮನಿಯ ನವೋದ್ಯಮವೊಂದು `ಮಿಷನ್ ಪಾಸಿಬಲ್' ಎಂಬ ಹೆಸರಿನ ಯೋಜನೆಗೆ ಜೂನ್ 23ರಂದು ಚಾಲನೆ ನೀಡಿತ್ತು. ಬಾಹ್ಯಾಕಾಶಕ್ಕೆ ನೆಗೆದಿದ್ದ `ನಿಕ್ಸ್' ಗಗನನೌಕೆ ಎರಡು ಕಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಭೂಮಿಗೆ ಕುಸಿದು ಪೆಸಿಫಿಕ್ ಮಹಾಸಾಗರಕ್ಕೆ ಅಪ್ಪಳಿಸಿದೆ. ಮಿಷನ್ ಪಾಸಿಬಲ್ ಆಂಶಿಕ ಯಶಸ್ಸು ಗಳಿಸಿದೆ. ಆದರೆ ನಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಪ್ರೀತಿಪಾತ್ರರ ಚಿತಾಭಸ್ಮವನ್ನು ನೀಡಿದ್ದ ಜನರ ಕ್ಷಮೆ ಯಾಚಿಸುವುದಾಗಿ ಗಗನನೌಕೆಯನ್ನು ರಚಿಸಿದ್ದ `ದಿ ಎಕ್ಸ್ಪ್ಲೋರೇಷನ್ ಕಂಪೆನಿ' ಹೇಳಿಕೆ ನೀಡಿದೆ.
Next Story