ಪಾಕಿಸ್ತಾನ : ಕಲ್ಲಿದ್ದಲ ಗಣಿ ಸ್ಫೋಟದಲ್ಲಿ 9 ಮಂದಿ ಮೃತ್ಯು, 7 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ (PTI)
ಪೇಷಾವರ : ನೈಋತ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 9 ಕಾರ್ಮಿಕರು ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಜಿಲ್ಲಾಧಿಕಾರಿಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ಶುಕ್ರವಾರ ವರದಿ ಮಾಡಿದೆ.
ಪ್ರಕ್ಷುಬ್ಧ ಬಲೂಚಿಸ್ತಾನದ ಹರ್ನಯ್ ವಲಯದಲ್ಲಿ ರಸ್ತೆ ಪಕ್ಕ ಇರಿಸಿದ್ದ ಬಾಂಬನ್ನು ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಬರುತ್ತಿದ್ದಂತೆಯೇ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಬಳಸಿ ಸ್ಫೋಟಿಸಲಾಗಿದೆ.
ಕನಿಷ್ಠ 9 ಕಾರ್ಮಿಕರು ಸಾವನ್ನಪ್ಪಿದ್ದು ಇತರ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಕಾರ್ಮಿಕರು ಸ್ವಾತ್ ಮತ್ತು ಶಾಂಗ್ಲಾ ಜಿಲ್ಲೆಗಳ ನಿವಾಸಿಗಳಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಸ್ಫೋಟಕ್ಕೆ ಹೊಣೆಯನ್ನು ಯಾವುದೇ ಗುಂಪು ವಹಿಸಿಲ್ಲ. ತನಿಖೆ ಮುಂದುವರಿಸಲಾಗಿದೆ ಎಂದು ಉಪ ಜಿಲ್ಲಾಧಿಕಾರಿ ಹೇಳಿದ್ದಾರೆ.
Next Story





