ಪಾಕಿಸ್ತಾನ: ಕುಟುಂಬದ ಒಪ್ಪಿಗೆಯಿಲ್ಲದೆ ವಿವಾಹವಾದ ದಂಪತಿಯ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್, ಜು.21: ಪಾಕಿಸ್ತಾನದಲ್ಲಿ ಕುಟುಂಬದವರ ವಿರೋಧದ ನಡುವೆಯೂ ಪ್ರೀತಿಸಿ ವಿವಾಹವಾಗಿದ್ದ ದಂಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯ ವೀಡಿಯೊ ವೈರಲ್ ಆಗಿದ್ದು ವೀಡಿಯೊದ ದೃಶ್ಯವನ್ನು ಆಧರಿಸಿ ಪೊಲೀಸರು 11 ಶಂಕಿತ ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಬಲೂಚಿಸ್ತಾನ ಪ್ರಾಂತದ ದೆಘಾರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಸುತ್ತಮುತ್ತ ಗುಂಪು ಸೇರಿದ್ದ ಜನರ ಸಮ್ಮುಖದಲ್ಲಿ ಓರ್ವ ವ್ಯಕ್ತಿ ಯುವ ದಂಪತಿಗೆ ಅತ್ಯಂತ ಸನಿಹದಲ್ಲಿ ಗುಂಡಿಕ್ಕಿರುವುದು ಸ್ಪಷ್ಟವಾಗಿದೆ. ಮೃತ ದಂಪತಿಯನ್ನು ಬಾನೊ ಬೀಬಿ ಮತ್ತು ಅಷಾನ್ ಉಲ್ಲಾ ಎಂದು ಗುರುತಿಸಲಾಗಿದೆ.
Next Story





