ಪಾಕಿಸ್ತಾನ: ಚೆಕ್ಪೋಸ್ಟ್ ಮೇಲೆ ದಾಳಿ; 4 ಮಂದಿ ಮೃತ್ಯು

ಪೇಷಾವರ, ಆ.3: ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಪೊಲೀಸ್ ಚೆಕ್ಪೋಸ್ಟೆ ಗೆ ನುಗ್ಗಿದ ಸುಮಾರು 50ರಷ್ಟು ಉಗ್ರರು ಓರ್ವ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಬನ್ನು ಜಿಲ್ಲೆಯ ಫತೇಹ್ ಖೇಲ್ ಪೊಲೀಸ್ ಚೆಕ್ಪೋಸ್ಟ್ ಮೇಲೆ ಶನಿವಾರ ತಡರಾತ್ರಿ ದಾಳಿ ನಡೆದಿದ್ದು ಪೊಲೀಸರ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಲ್ಲ ಎಂದು ಪೊಲೀಸರು ರವಿವಾರ ಹೇಳಿದ್ದಾರೆ.
Next Story





