ಪಾಕಿಸ್ತಾನ | ಜಾಫರ್ ಎಕ್ಸ್ಪ್ರೆಸ್ ರೈಲಿನ ಮೇಲೆ ಬಾಂಬ್ ದಾಳಿ : 12 ಮಂದಿಗೆ ಗಾಯ

PC : X \ @Resonant_News
ಪೇಷಾವರ, ಸೆ.24: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದ ಮತ್ಸುಂಗ್ ಜಿಲ್ಲೆಯಲ್ಲಿ ಕ್ವೆಟಾ ನಗರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲಿನ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ರೈಲಿನಲ್ಲಿ ಸುಮಾರು 270 ಪ್ರಯಾಣಿಕರಿದ್ದರು. ಬಾಂಬ್ ದಾಳಿಯಿಂದಾಗಿ 6 ಬೋಗಿಗಳು ಹಳಿತಪ್ಪಿದ್ದು ಒಂದು ಬೋಗಿ ಉರುಳಿಬಿದ್ದಿದೆ. ಗಾಯಾಳುಗಳಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಇದೇ ಪ್ರದೇಶದಲ್ಲಿ ರೈಲುಹಳಿಗಳ ಪಕ್ಕ ಮಂಗಳವಾರ ಬೆಳಿಗ್ಗೆ ಮತ್ತೊಂದು ಸ್ಫೋಟ ಸಂಭವಿಸಿತ್ತು, ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





