ಪಾಕಿಸ್ತಾನ ತನ್ನದೇ ಜನರ ಮೇಲೆ ಬಾಂಬ್ ಹಾಕುವ ಬದಲು ಆರ್ಥಿಕತೆಯತ್ತ ಗಮನ ನೀಡಲಿ : ವಿಶ್ವಸಂಸ್ಥೆ ಸಭೆಯಲ್ಲಿ ಭಾರತ ವಾಗ್ದಾಳಿ

PC : NDTV
ವಿಶ್ವಸಂಸ್ಥೆ, ಸೆ.24: ತನ್ನದೇ ಜನರ ಮೇಲೆ ಬಾಂಬ್ ಹಾಕುವ ಬದಲು ಮತ್ತು ಜಾಗತಿಕವಾಗಿ ಅಸ್ಥಿರತೆ ಸೃಷ್ಟಿಸಲು ಭಯೋತ್ಪಾದಕರನ್ನು ರಫ್ತು ಮಾಡುವ ಬದಲು ಪಾಕಿಸ್ತಾನ ತನ್ನ ಆರ್ಥಿಕತೆಯತ್ತ ಗಮನ ಹರಿಸಬೇಕು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ(ಯುಎನ್ಎಚ್ಆರ್ಸಿ)ಯ ಸಭೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ.
ಇಂತಹ ವಿರೋಧಾಭಾಸದ ಕ್ರಮಗಳನ್ನು ಮಾದರಿಯಾಗಿಸಿಕೊಂಡ ದೇಶದ ನಿಯೋಗವು ಭಾರತದ ವಿರುದ್ಧ ಆಧಾರ ರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವುದನ್ನು ಮುಂದುವರಿಸಿದೆ. ನಮ್ಮ ಪ್ರದೇಶದ ಮೇಲೆ ಕಣ್ಣು ಹಾಕುವ ಬದಲು, ತಾವು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು ಉತ್ತಮ' ಎಂದು ಯುಎನ್ಎಚ್ಆರ್ಸಿ ಸಭೆಯಲ್ಲಿ ಭಾರತದ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ ವಾಗ್ದಾಳಿ ನಡೆಸಿರುವುದಾಗಿ ವರದಿಯಾಗಿದೆ.
Next Story





