ಪಾಕಿಸ್ತಾನ | ಪೇಷಾವರದಲ್ಲಿ ಸ್ಫೋಟ : 9 ಮಂದಿ ಮೃತ್ಯು, ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಗಾಯ

Photo Credit : X
ಇಸ್ಲಮಾಬಾದ್, ಅ.3: ಪಾಕಿಸ್ತಾನದ ಪೇಷಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ನಾಲ್ವರು ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡಿರುವುದಾಗಿ `ದಿ ಡಾನ್' ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಪೊಲೀಸ್ ವಾಹನಗಳನ್ನು ಗುರಿಯಾಗಿಸಿ ರಸ್ತೆ ಪಕ್ಕ ಇರಿಸಿದ್ದ ಸ್ಫೋಟಕವನ್ನು ದೂರನಿಯಂತ್ರಕ ಸಾಧನದಿಂದ ಸ್ಫೋಟಿಸಿರುವ ಸಾಧ್ಯತೆಯಿದೆ. ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ರವಾನಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಗೊಂಡ ನಾಲ್ವರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿದೆ.
Next Story





