Pakistan | ಪೊಲೀಸ್ ಠಾಣೆಗೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ; 14 ಭದ್ರತಾ ಸಿಬ್ಬಂದಿ ಮೃತ್ಯು

Screengrab : X
ಪೇಷಾವರ, ಜು.16: ಖೈಬರ್ ಪಖ್ತುಂಖ್ವಾದ ಬನ್ನೂ ಜಿಲ್ಲೆಯ ಮಿರ್ಯಾನ್ ಪೊಲೀಸ್ ಠಾಣೆಗೆ ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ, ಕನಿಷ್ಠ 14 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್-ನ್ಯೂಸ್18 ವರದಿ ಮಾಡಿದೆ.
ಮೃತರಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆತ್ಮಹತ್ಯಾ ದಾಳಿಯ ಜವಾಬ್ದಾರಿಯನ್ನು `ಇತ್ತಿಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್' ಎಂಬ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.
Next Story




