ಪಾಕ್ ವಾಯು ಸೇನೆಯ ತರಬೇತಿ ನೆಲೆ ಮೇಲೆ ಉಗ್ರರ ದಾಳಿ: ಮೂರು ವಿಮಾನಗಳಿಗೆ ಹಾನಿ

Screengrab:X
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಾಕಿಸ್ತಾನಿ ವಾಯು ಪಡೆಯ ತರಬೇತಿ ನೆಲೆ ಮೇಲೆ ಇಂದು ಮುಂಜಾನೆ ಭಾರೀ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಮೂರು ಯುದ್ಧವಿಮಾನಗಳು ಹಾನಿಗೀಡಾಗಿವೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ.
ಮಿಯಾನ್ವಲಿ ತರಬೇತಿ ವಾಯು ನೆಲೆ ಮೇಲಿನ ದಾಳಿಯನ್ನು ಪಾಕ್ ಸೈನಿಕರು ಮೂವರು ದಾಳಿಕೋರರನ್ನು ಹತ್ಯೆಗೈಯ್ಯುವ ಮೂಲಕ ಹಾಗೂ ಇತರ ಮೂವರನ್ನು ತಡೆಗಟ್ಟುವ ಮೂಲಕ ವಿಫಲಗೊಳಿಸಿದ್ದಾರೆ ಎಂದು ಸೇನೆ ತಿಳಿಸಿದೆ.
ಆದರೆ ದಾಳಿ ವೇಳೆ ಅದಾಗಲೇ ಅಲ್ಲಿದ್ದ ಮೂರು ವಿಮಾನಗಳು ಹಾಗೂ ಒಂದು ಇಂಧನ ಬೌಸರ್ ಹಾನಿಗೀಡಾಗಿವೆ ಎಂದು ಸೇನೆ ತಿಳಿಸಿದೆ.
ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವ ಪ್ರದೇಶದಲ್ಲಿ ನಡೆದ ಸರಣಿ ಉಗ್ರ ದಾಳಿಗಳಲ್ಲಿ ಕನಿಷ್ಠ 17 ಮಂದಿ ಮೃತಪಟ್ಟ ನಂತರದ ಬೆಳವಣಿಗೆಯಲ್ಲಿ ಇಂದಿನ ದಾಳಿ ನಡೆದಿದೆ.
Next Story





