ಶಾಂತಿ ಮಾತುಕತೆಗೆ ಪ್ರಯತ್ನ ಮುಂದುವರಿಸಿದ ಪಾಕಿಸ್ತಾನ: ವರದಿ

ಸಚಿವ ಮೊಹ್ಸಿನ್ ನಖ್ವಿ | Photo Credit : facebook
ಇಸ್ಲಾಮಾಬಾದ್, ಮೇ 19: ಇರಾನ್ ಮುಂದಿರಿಸಿದ ಇತ್ತೀಚಿನ ಶಾಂತಿ ಪ್ರಸ್ತಾಪ ಅಸಮರ್ಪಕವಾಗಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದ ಬಳಿಕ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಇರಾನ್ಗೆ ಹಿಂದಿರುಗಿದ್ದು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇರಾನ್-ಅಮೆರಿಕ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ರವಿವಾರ ಇರಾನ್ ನ ಪ್ರಸ್ತಾಪದೊಂದಿಗೆ ಪಾಕಿಸ್ತಾನಕ್ಕೆ ಮರಳಿದ್ದ ನಖ್ವಿ ಅದನ್ನು ಅಮೆರಿಕಕ್ಕೆ ರವಾನಿಸಿದ್ದರು.
ಈ ಮಧ್ಯೆ, ಇರಾನ್ ಮಾತುಕತೆಗೆ ಸಂಬಂಧಿಸಿದ ಉನ್ನತ ಮಟ್ಟದ ರಾಜತಾಂತ್ರಿಕ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, ವಿದೇಶಾಂಗ ಸಚಿವ ಇಷಾಕ್ ದಾರ್ ಮತ್ತು ರಕ್ಷಣಾ ಸಚಿವ ಖವಾಜಾ ಆಸಿಫ್ ಅನುಪಸ್ಥಿತಿ ಎದ್ದುಕಾಣುತ್ತಿದ್ದು, ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story




