ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿದ ಪಾಕಿಸ್ತಾನ, ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧ

Photo: Twitter
ಕರಾಚಿ: ರಾಜಕೀಯ ಪ್ರಕ್ಷುಬ್ಧತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆ, ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಅವರ ಶಿಫಾರಸಿನ ಮೇರೆಗೆ ನಿನ್ನೆ ಸಂಜೆ ಪಾಕಿಸ್ತಾನವು ತನ್ನ ಸಂಸತ್ತನ್ನು ವಿಸರ್ಜಿಸಿದ್ದು, ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧಪಡಿಸಿದೆ.
ಅಸೆಂಬ್ಲಿ ವಿಸರ್ಜನೆಯು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಲು ಸಾಧ್ಯವಾಗದ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಉಸ್ತುವಾರಿ ಸರಕಾರಕ್ಕೆ ದಾರಿ ಮಾಡಿಕೊಟ್ಟಿದೆ.
ಎಪ್ರಿಲ್ 2022 ರಲ್ಲಿ ಖಾನ್ ಅವರನ್ನು ಅಧಿಕಾರದಿಂದ ತೆಗೆದುಹಾಕಿದಾಗಿನಿಂದ ಅವರ ವಿರುದ್ಧ ದಾಖಲಾಗಿರುವ ಹಲವಾರು ಪ್ರಕರಣಗಳಲ್ಲಿ ಒಂದಾಗಿರುವ ಭ್ರಷ್ಟಾಚಾರ ಆರೋಪದ ಮೇಲೆ ಖಾನ್ ವಾರಾಂತ್ಯದಲ್ಲಿ ಜೈಲು ಪಾಲಾದರು.
ಪಾಕಿಸ್ತಾನದ ಅಧ್ಯಕ್ಷರು ನಿರ್ಗಮಿಸುವ ಸರಕಾರಕ್ಕೆ ಹೊಸ ಮಧ್ಯಂತರ ಪ್ರಧಾನಿಯನ್ನು ನೇಮಿಸಲು ಮೂರು ದಿನಗಳು ಹಾಗೂ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು 90 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ನಿರ್ಗಮನ ಸರಕಾರ ಮುಂದಿನ ವರ್ಷದ ತನಕ ಚುನಾವಣೆ ವಿಳಂಬವಾಗಬಹುದು ಎಂದು ಎಚ್ಚರಿಸಿದೆ.
ವರದಿಗಳ ಪ್ರಕಾರ, ಪಾಕಿಸ್ತಾನ ಸರಕಾರವು ಚುನಾವಣೆಯನ್ನು ಮುಂದೂಡಲು ಯೋಚಿಸುತ್ತಿದೆ