ಭಾರತ ಸಿಂಧೂ ನದಿ ನೀರನ್ನು ಆಕ್ರಮವಾಗಿ ಹಿಡಿದಿಟ್ಟಿದೆ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಆರೋಪ

ಶಹಬಾಜ್ ಶರೀಫ್ | PTI
ವಿಶ್ವಸಂಸ್ಥೆ, ಸೆ.27: ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರು, ಪಾಕಿಸ್ತಾನದ ವಿದೇಶಾಂಗ ನೀತಿಯು ಶಾಂತಿ, ಪರಸ್ಪರ ಗೌರವ ಹಾಗೂ ಸಹಕಾರವನ್ನು ಆಧರಿಸಿದೆ ಎಂದರು.
ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವುದರಲ್ಲಿ ನಾವು ನಂಬಿಕೆಯಿರಿಸಿದ್ದೇವೆ ಎಂದು ಹೇಳಿದ್ದರು.
ಆದರೆ ಕಾಶ್ಮೀರದ ಕುರಿತ ಭಾರತದ ನೀತಿಯನ್ನು ಶರೀಫ್ ತನ್ನ ಭಾಷಣದಲ್ಲಿ ಟೀಕಿಸಿದರು. ವಿಶ್ವಸಂಸ್ಥೆಯ ಆಶ್ರಯದಲ್ಲಿ ಕಾಶ್ಮೀರ ಬಗ್ಗೆ ನಿಷ್ಪಕ್ಷಪಾತವಾಗಿ ಜನಮತಗಣನೆಯಾಗಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು. ಕಾಶ್ಮೀರದ ಜನತೆಯ ಸ್ವಯಂನಿರ್ಧಾರದ ಮೂಲಭೂತ ಹಕ್ಕನ್ನು ತಾನು ಬೆಂಬಲಿಸುವುದಾಗಿ ಅವರು ಹೇಳಿದರು.
ಭಾರತದ ಜೊತೆ ಇತ್ಯರ್ಥವಾಗದೆ ಬಾಕಿಯುಳಿದಿರುವ ಎಲ್ಲಾ ರೀತಿಯ ವಿವಾದಗಳನ್ನು ಸಮಗ್ರ, ಸಂಯೋಜಿತ ಹಾಗೂ ಫಲಿತಾಂಶ ಕೇಂದ್ರೀತ ಮಾತುಕತೆಯ ಮೂಲಕ ಬಗೆಹರಿಸಲು ಸಿದ್ಧರುವುದಾಗಿ ಅವು ಹೇಳಿದ್ದಾರೆ.
ಸಿಂಧೂ ನದಿಯ ಒಪ್ಪಂದವನ್ನು ಭಾರತವು ರದ್ದುಪಡಿಸಿರುವುದನ್ನು ಕೂಡಾ ಶರೀಫ್ ಪ್ರಶ್ನಿಸಿದರು. ಭಾರತವು ಸಿಂಧೂ ನದಿಯ ನೀರನ್ನು ಆಕ್ರಮವಾಗಿ ಹಿಡಿದಿಟ್ಟಿದೆ ಹಾಗೂ ಒಪ್ಪಂದದ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದರು.
ಸಿಂಧೂ ನದಿ ನೀರಿನ ಮೇಲೆ ಪಾಕಿಸ್ತಾನದ 24 ಕೋಟಿ ಜನರಿಗಿರುವ ಹಕ್ಕನ್ನು ರಕ್ಷಿಸಲು ಬದ್ಧವಾಗಿರುವುದಾಗಿ ಶರೀಫ್ ಹೇಳಿದರು.







