ಜಲ ಯೋಜನೆಗಳ ಕಾರ್ಮಿಕರನ್ನು ರಕ್ಷಿಸಲು ವಿಶೇಷ ಪಡೆ ಸ್ಥಾಪಿಸಲಿರುವ ಪಾಕಿಸ್ತಾನ

ಸಾಂದರ್ಭಿಕ ಚಿತ್ರ | Photo Credit : PTI
ಇಸ್ಲಮಾಬಾದ್, ಮೇ 25: ಪ್ರಮುಖ ಜಲ ಮೂಲಸೌಕರ್ಯ ಯೋಜನೆಗಳು ಮತ್ತು ಅದರ ಕಾರ್ಮಿಕರನ್ನು ರಕ್ಷಿಸುವ ಉದ್ದೇಶದ(ಪ್ರಾಥಮಿಕವಾಗಿ ಚೀನೀ ಪ್ರಜೆಗಳ ರಕ್ಷಣೆಯನ್ನು ಗುರಿಯಾಗಿಸಿಕೊಂಡಿರುವ) `ಡಬ್ಯೂಎಪಿಡಿಎ ಸೆಕ್ಯುರಿಟಿ ಫೋರ್ಸ್' ಸ್ಥಾಪನೆಗೆ ಪಾಕಿಸ್ತಾನ ಸರಕಾರ ಯೋಜಿಸಿದ್ದು ಸಂಸತ್ತಿನಲ್ಲಿ ಅಧಿಕೃತವಾಗಿ ಶಾಸನವನ್ನು ಪರಿಚಯಿಸಿದೆ.
ಈ ನಿಟ್ಟಿನಲ್ಲಿ ಮಸೂದೆಯನ್ನು ಜಲಸಂಪನ್ಮೂಲ ಸಚಿವ ಮುಹಮ್ಮದ್ ಮುಯೀನ್ ವಟ್ಟೂ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಿದ್ದಾರೆ . ಪಾಕಿಸ್ತಾನದ ನೀರು ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ(ಡಬ್ಲ್ಯೂಎಪಿಡಿಎ)ದ ಸ್ವತ್ತುಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪ್ರಧಾನ ನಿರ್ದೇಶಕರ ನೇತೃತ್ವದ ಸ್ವತಂತ್ರ, ವಿಶೇಷ ಏಜೆನ್ಸಿಯಾಗಿ ಇದು ಕಾರ್ಯನಿರ್ವಹಿಸುತ್ತದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
Next Story




