ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಇಟ್ಟಿಗೆಯನ್ನು ಪಾಕ್ ಸೈನಿಕರು ಇಡಲಿದ್ದಾರೆ: ಪಾಕ್ ಸಂಸದೆಯ ಪ್ರಚೋದನಕಾರಿ ಹೇಳಿಕೆ

ಪಲ್ವಾಷಾ ಮುಹಮ್ಮದ್ ಝಾಯಿಖಾನ್ | PC : X
ಇಸ್ಲಾಮಾಬಾದ್: ಅಯೋಧ್ಯೆಯ ವಿಷಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ಸಂಸದೆ ಪಲ್ವಾಷಾ ಮುಹಮ್ಮದ್ ಝಾಯಿಖಾನ್ `ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿ ನಿರ್ಮಾಣಕ್ಕೆ ಪ್ರಥಮ ಇಟ್ಟಿಗೆಯನ್ನು ಪಾಕಿಸ್ತಾನದ ಸೈನಿಕರು ಇಡಲಿದ್ದಾರೆ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಝಾನ್ ನೀಡಲಿದ್ದಾರೆ' ಎಂದಿದ್ದಾರೆ.
ಪಾಕ್ ಸಂಸತ್ನ ಮೇಲ್ಮನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ` ನಾವೇನೂ ಬಳೆ ತೊಟ್ಟುಕೊಂಡಿಲ್ಲ. ಒಂದು ವೇಳೆ ಯುದ್ಧ ಆರಂಭಗೊಂಡರೆ ಸಿಖ್ ಯೋಧರು ಪಾಕಿಸ್ತಾನದ ಮೇಲೆ ದಾಳಿ ಮಾಡುವುದಿಲ್ಲ. ಯಾಕೆಂದರೆ ಪಾಕಿಸ್ತಾನವು ಅವರಿಗೆ ಗುರು ನಾನಕರ ಭೂಮಿಯಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
Pakistani Senator Palwasha Mohammad Zai Khan has stirred controversy with inflammatory remarks made on April 30, claiming that the Pakistan Army would lay the first brick of a new Babri Mosque in Ayodhya and that the first azan would be delivered by Army Chief Asim Munir.
— The Assam Tribune (@assamtribuneoff) April 30, 2025
In a… pic.twitter.com/p44xEuSI8v







