ಉತ್ತರ ಗಾಝಾಕ್ಕೆ ಫೆಲೆಸ್ತೀನೀಯರ ವಾಪಸಾತಿ ಆರಂಭ

PC : aljazeera.com
ಗಾಝಾ : ಮತ್ತೆ 6 ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಅಂತಿಮಗೊಂಡ ಹಿನ್ನೆಲೆಯಲ್ಲಿ ಸ್ಥಳಾಂತರಿತ ಫೆಲೆಸ್ತೀನೀಯರು ಯುದ್ಧದಿಂದ ಜರ್ಝರಿತ ಗಾಝಾ ಪಟ್ಟಿಯ ಉತ್ತರ ಪ್ರಾಂತದತ್ತ ಮರಳುವ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ ಎಂದು ಇಸ್ರೇಲ್ ಮತ್ತು ಹಮಾಸ್ ಅಧಿಕಾರಿಗಳು ಹೇಳಿದ್ದಾರೆ.
ಕದನ ವಿರಾಮ ಒಪ್ಪಂದವನ್ನು ಹಮಾಸ್ ಉಲ್ಲಂಘಿಸಿರುವ ಕಾರಣ ಉತ್ತರ ಗಾಝಾದಲ್ಲಿರುವ ತಮ್ಮ ಮನೆಗಳಿಗೆ ಫೆಲೆಸ್ತೀನೀಯರ ವಾಪಸಾತಿಯನ್ನು ತಡೆದಿರುವುದಾಗಿ ಇಸ್ರೇಲ್ ರವಿವಾರ ಹೇಳಿತ್ತು. ಬಳಿಕ ಹೊಸ ಒಪ್ಪಂದ ಏರ್ಪಟ್ಟಿದ್ದು 6 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಕೊಂಡಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ
Next Story





