ಶಾಂತಿ ಮಾತುಕತೆ| ಯಾವುದೇ ನಿಯೋಗ ಇಸ್ಲಾಮಾಬಾದ್ಗೆ ಭೇಟಿ ನೀಡಿಲ್ಲ: ಇರಾನ್ ಸ್ಪಷ್ಟನೆ

Photo credit : AP
ಟೆಹರಾನ್, ಎ.21: ಇರಾನ್ನಿಂದ ಯಾವುದೇ ನಿಯೋಗ ಇಸ್ಲಾಮಾಬಾದ್ಗೆ ಭೇಟಿ ನೀಡಿಲ್ಲ ಎಂದು ಇರಾನ್ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಮಂಗಳವಾರ ಹೇಳಿಕೆ ನೀಡಿದೆ.
ಇಲ್ಲಿಯವರೆಗೆ ಇರಾನ್ನಿಂದ, ಮುಖ್ಯ, ದ್ವಿತೀಯ, ಪ್ರಾಥಮಿಕ ಅಥವಾ ಮಾಧ್ಯಮಿಕ ಸೇರಿದಂತೆ ಯಾವುದೇ ನಿಯೋಗವು ಪಾಕಿಸ್ತಾನಕ್ಕೆ ತೆರಳಿಲ್ಲ ಎಂದು ಟಿವಿ ವಾಹಿನಿ ಹೇಳಿದ್ದು ಇರಾನ್ನ ನಿಯೋಗ ಈಗಾಗಲೇ ಇಸ್ಲಾಮಾಬಾದ್ ತಲುಪಿದೆ ಎಂಬ ವರದಿಯನ್ನು ತಳ್ಳಿಹಾಕಿದೆ.
ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿರುವ ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವವನ್ನು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ವಹಿಸಲಿದ್ದಾರೆ ಎಂದು ಶ್ವೇತಭವನ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ತಮ್ಮ ದೇಶದ ನಿಯೋಗ ಪಾಲ್ಗೊಳ್ಳುತ್ತದೆಯೇ, ಮತ್ತು ಪಾಲ್ಗೊಂಡರೆ ಅದರ ನೇತೃತ್ವವನ್ನು ಯಾರು ವಹಿಸುತ್ತಾರೆ ಎಂಬ ಬಗ್ಗೆ ಇರಾನ್ ಯಾವುದೇ ಮಾಹಿತಿ ನೀಡಿಲ್ಲ. ಕಳೆದ ಬಾರಿ ಇಸ್ಲಾಮಾಬಾದ್ ನಲ್ಲಿ ನಡೆದಿದ್ದ ಮಾತುಕತೆಯಲ್ಲಿ ಇರಾನ್ನ ಸ್ಪೀಕರ್ ಘಾಲಿಬಾಫ್ ನಿಯೋಗದ ನೇತೃತ್ವ ವಹಿಸಿದ್ದರು.
Next Story




