ಫಿಲಿಪ್ಪೀನ್ಸ್ ಶಾಲೆಯಲ್ಲಿ ಗುಂಡಿನ ದಾಳಿ: ಮೂವರು ಮೃತ್ಯು, 8 ಜನರಿಗೆ ಗಾಯ

ಸಾಂದರ್ಭಿಕ ಚಿತ್ರ | Photo Credit : magnific.com
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್ನ ಪ್ರೌಢಶಾಲೆಯೊಂದರಲ್ಲಿ ಶುಕ್ರವಾರ 16 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿ, ಎಂಟು ಜನರನ್ನು ಗಾಯಗೊಳಿಸಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣದ ಮಿಂಡನಾವೊ ಪ್ರಾಂತದ ಬಾಂಗಾ ಪುರಸಭೆಯ ಬಾಂಗಾ ನ್ಯಾಷನಲ್ ಹೈಸ್ಕೂಲ್ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಎಂಟು ವಿದ್ಯಾರ್ಥಿಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಮಧ್ಯಾಹ್ನದ ಊಟದ ನಂತರ ದಾಳಿ ನಡೆಸಲು ಯೋಜಿಸಿರುವುದರಿಂದ ಮನೆಗೆ ಹೋಗುವಂತೆ ಆರೋಪಿ ವಿದ್ಯಾರ್ಥಿ ಸ್ನೇಹಿತರಿಗೆ ಹೇಳಿದ್ದನು. ಆದರೆ, ಆತನ ಸ್ನೇಹಿತರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಸ್ಥಳೀಯ ಮೇಯರ್ ಆಲ್ಬರ್ಟ್ ಪಲೆನ್ಸಿಯಾ ತಿಳಿಸಿದ್ದಾರೆ.
Next Story




