ಆಗಸದಲ್ಲಿ ವಿಮಾನಗಳ ಡಿಕ್ಕಿ; ಪೈಲಟ್ ಮೃತ್ಯು

Photo : ABC News
ಸಿಡ್ನಿ, ನ.30: ಆಸ್ಟ್ರೇಲಿಯಾದ ಸಿಡ್ನಿ ನಗರದ ಹೊರವಲಯದಲ್ಲಿ ರವಿವಾರ ಎರಡು ಲಘು ವಿಮಾನಗಳು ಆಗಸದಲ್ಲಿ ಡಿಕ್ಕಿಯಾದ ಬಳಿಕ ಒಂದು ವಿಮಾನ ನೆಲಕ್ಕೆ ಪತನಗೊಂಡಿದ್ದು ಒಬ್ಬ ಪೈಲಟ್ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಿಡ್ನಿಯ ನೈಋತ್ಯ ಉಪನಗರ ವೆಡರ್ಬರ್ನ್ನ ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಪೈಲಟ್ ಮೃತದೇಹ ಪತ್ತೆಯಾಗಿದೆ. ಮತ್ತೊಂದು ವಿಮಾನವು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಅದರ ಪೈಲಟ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





