ಹಸೀನಾ ಹಸ್ತಾಂತರ ಆಗುವವರೆಗೆ ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ ನೀಡುವುದಿಲ್ಲ : ಬಾಂಗ್ಲಾದೇಶ

ತಾರಿಕ್ ರೆಹಮಾನ್, ಶೇಖ್ ಹಸೀನಾ | Photo Credit : PTI
ಢಾಕಾ, ಆ.16: ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಬಾಂಗ್ಲಾದೇಶಕ್ಕೆ ಬೇಕಾಗಿರುವ ಇತರ ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರ ಪ್ರಕ್ರಿಯೆಯನ್ನು ಭಾರತ ಮುಂದುವರಿಸದ ಹೊರತು, ಪ್ರಧಾನಿ ತಾರಿಕ್ ರೆಹಮಾನ್ ಅವರ ಪ್ರಸ್ತಾವಿತ ಭಾರತ ಭೇಟಿ ನಡೆಯುವ ಸಾಧ್ಯತೆಯಿಲ್ಲ ಎಂದು ಬಾಂಗ್ಲಾದೇಶ ರವಿವಾರ ತಿಳಿಸಿದೆ.
ಆಗಸ್ಟ್ 5 ರಂದು ಹೊಸದಿಲ್ಲಿಯಲ್ಲಿ ಹಸೀನಾ ಭಾಗವಹಿಸಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಿಂದಾಗಿ ಈ ಭೇಟಿಗಳ ಮೇಲೆ ಪರಿಣಾಮ ಬೀರಿದೆ. ಈ ಭೇಟಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಎ.ಕೆ.ಎಂ. ಶಹೀದುಲ್ ಕರೀಮ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ, ಶೇಖ್ ಹಸೀನಾ ಮತ್ತು ಇತರ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು, ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ಆರೋಪಿಗಳನ್ನು ಹಸ್ತಾಂತರಿಸುವ ನಮ್ಮ ಮನವಿಯ ಮೇಲೆ ಭಾರತೀಯ ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ನಾವು ವಿನಂತಿಸಿದ್ದೇವೆ. ನಾವು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ' ಎಂದು ಕರೀಮ್ ತಿಳಿಸಿದ್ದಾರೆ.




