ಕಲುಷಿತ ದೇಶಗಳ ಪಟ್ಟಿ: ಪಾಕಿಸ್ತಾನ ಪ್ರಥಮ, ಭಾರತಕ್ಕೆ 6ನೇ ಸ್ಥಾನ

ಸಾಂದರ್ಭಿಕ ಚಿತ್ರ | Photo Credit : freepik
ಜಿನೆವಾ: ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿ(2025)ಯಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದೆ. ಅದರ ವಾಯು ಗುಣಮಟ್ಟವು ಕಳಪೆಯಾಗಿದ್ದು ಅಪಾಯಕಾರಿ ಪಿಎಂ2.5 ಕಣಗಳ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಮಿತಿಗಿಂತ 13 ಪಟ್ಟು ಹೆಚ್ಚಿದೆ ಎಂದು ಮಂಗಳವಾರ ಬಿಡುಗಡೆಗೊಂಡಿರುವ ಸಂಶೋಧನಾ ವರದಿ ಹೇಳಿದೆ.
ಬಾಂಗ್ಲಾದೇಶ, ತಜಿಕಿಸ್ತಾನ್, ಚಾಡ್ ಮತ್ತು ಕಾಂಗೋ ಗಣರಾಜ್ಯ ಕ್ರಮವಾಗಿ ಎರಡು ಮೂರು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಭಾರತ, ಕುವೈಟ್, ಉಗಾಂಡ, ಈಜಿಪ್ಟ್, ಉಜ್ಬೇಕಿಸ್ತಾನ ಆ ಬಳಿಕದ ಸ್ಥಾನದಲ್ಲಿವೆ ಎಂದು ಐಕ್ಯು ವಾಯು ಗುಣಮಟ್ಟ ವರದಿ ಹೇಳಿದೆ.
ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಲೋನಿ ನಗರ ಅಗ್ರಸ್ಥಾನದಲ್ಲಿದ್ದರೆ ಚೀನಾದ ಹೊಟಾನ್ ಎರಡನೇ ಸ್ಥಾನದಲ್ಲಿದೆ. ವಿಶ್ವದ ಅಗ್ರ 25 ಅತ್ಯಂತ ಕಲುಷಿತ ನಗರಗಳು ಭಾರತ, ಪಾಕಿಸ್ತಾನ ಮತ್ತು ಚೀನಾದಲ್ಲಿರುವುದು ಗಮನಾರ್ಹವಾಗಿದೆ.
Next Story





