‘ಶಕ್ತಿಯ ಪ್ರದರ್ಶನ ನಿಲ್ಲಿಸಿ, ಯುದ್ಧ ಸಾಕು’: ಪೋಪ್ ಲಿಯೋ ಸಂದೇಶ

ಪೋಪ್ ಲಿಯೋ | Photo Credit ; PTI
ವ್ಯಾಟಿಕನ್ ಸಿಟಿ, ಎ.12: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಸಂಘರ್ಷದ ಹಿನ್ನೆಲೆ ಪೋಪ್ ಲಿಯೋ XIV ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂಘರ್ಷಗಳಿಗೆ ಕಾರಣವಾಗುತ್ತಿರುವ “ಸರ್ವಶಕ್ತಿಯ ಭ್ರಮೆ”ಯನ್ನು ಖಂಡಿಸಿದ್ದಾರೆ.
ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಂಜೆಯ ಪ್ರಾರ್ಥನಾ ವೇಳೆ ಮಾತನಾಡಿದ ಪೋಪ್, “ಸ್ವಾರ್ಥ ಮತ್ತು ಹಣದ ಆರಾಧನೆ ಸಾಕು; ಶಕ್ತಿಯ ಪ್ರದರ್ಶನ ಸಾಕು; ಯುದ್ಧ ಸಾಕು,” ಎಂದು ಹೇಳಿದರು.
ಶಕ್ತಿಯ ಆಧಾರದ ಮೇಲೆ ಪ್ರಭುತ್ವ ಸಾಧಿಸುವ ಮನೋಭಾವವೇ ಹಿಂಸಾಚಾರ ಮತ್ತು ಯುದ್ಧಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪೋಪ್ ತಮ್ಮ ಭಾಷಣದಲ್ಲಿ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಸಂದೇಶವು ಅಮೆರಿಕದ ರಾಜಕೀಯ ಹಾಗೂ ಮಿಲಿಟರಿ ವಲಯವನ್ನು ಗುರಿಯಾಗಿರಿಸಿಕೊಂಡಂತೆಯೇ ಕಂಡುಬಂತು. ಅಮೆರಿಕದ ಮಿಲಿಟರಿ ಶ್ರೇಷ್ಠತೆಯ ಬಗ್ಗೆ ಹೆಮ್ಮೆಪಡುವ ಹಾಗೂ ಧಾರ್ಮಿಕ ಪರಿಭಾಷೆಯಲ್ಲಿ ಯುದ್ಧವನ್ನು ಸಮರ್ಥಿಸುವ ಪ್ರವೃತ್ತಿಯ ಮೇಲೆ ಅವರು ಪರೋಕ್ಷವಾಗಿ ಟೀಕಿಸಿದರು.
ಜಾಗತಿಕ ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವಂತೆ ಪೋಪ್ ಕರೆ ನೀಡಿದರು.




