ಗಾಝಾದ ಜನರ ನೋವನ್ನು ಮರೆಯಬಾರದು : ಜಗತ್ತಿಗೆ ಪೋಪ್ ಲಿಯೋ ಆಗ್ರಹ
"ಗಾಝಾ ಮೇಲೆ ಇಸ್ರೇಲ್ನ ದೈನಂದಿನ ದಾಳಿ ಮುಂದುವರಿದಿದೆ"

Photo | Reuters
ಟೆಹರಾನ್ : ಗಾಝಾದ ಜನರ ನೋವನ್ನು ಮರೆಯಬಾರದು ಎಂದು ರವಿವಾರದ ಪ್ರಾರ್ಥನಾ ಸಂದೇಶದಲ್ಲಿ ಪೋಪ್ ಲಿಯೋ ಜಗತ್ತಿಗೆ ಆಗ್ರಹಿಸಿದ್ದಾರೆ.
ಇರಾನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ಮತ್ತು ಇರಾನ್ ಇಸ್ರೇಲ್ ಸಂಘರ್ಷ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದರೂ, ಗಾಝಾದ ಮೇಲೆ ಇಸ್ರೇಲ್ ದೈನಂದಿನ ದಾಳಿಯನ್ನು ಮುಂದುವರಿಸಿದೆ. ಗಾಝಾದ ಜನರ ನೋವನ್ನು ಯಾರೂ ಮರೆಯಬಾರದು. ಗಾಝಾದ ಮೇಲೆ ಇಸ್ರೇಲ್ ನಡೆಸುವ ದೈನಂದಿನ ದಾಳಿಗೆ ನೂರಾರು ಜನರ ಪ್ರಾಣ ಹಾನಿಯಾಗುತ್ತಿದೆ. ಹಲವರಿಗೆ ಗಾಯಗಳಾಗುತ್ತಿದೆ ಎಂದು ಪೋಪ್ ಲಿಯೋ ಹೇಳಿದ್ದಾರೆ.
ಈ ಸನ್ನಿವೇಶಗಳಲ್ಲಿ ಗಾಝಾ ಮತ್ತು ಇತರ ಪ್ರದೇಶಗಳಲ್ಲಿನ ಜನರ ನೋವನ್ನು ಮರೆತುಬಿಡುವ ಅಪಾಯವಿದೆ. ಅಲ್ಲಿ ಸಾಕಷ್ಟು ಮಾನವೀಯ ನೆರವಿನ ಅಗತ್ಯವು ಹೆಚ್ಚು ತುರ್ತಾಗಿದೆ ಎಂದು ಪೋಪ್ ಲಿಯೋ ಹೇಳಿದ್ದಾರೆ.
ʼರಾಜತಾಂತ್ರಿಕತೆಯ ಹಾದಿಯು ಶಸ್ತ್ರಾಸ್ತ್ರಗಳನ್ನು ಮೌನಗೊಳಿಸಲಿ, ರಾಷ್ಟ್ರಗಳು ತಮ್ಮ ಭವಿಷ್ಯವನ್ನು ಹಿಂಸೆ ಮತ್ತು ರಕ್ತಸಿಕ್ತ ಸಂಘರ್ಷಗಳೊಂದಿಗೆ ಅಲ್ಲ, ಶಾಂತಿ ಪ್ರಯತ್ನಗಳೊಂದಿಗೆ ರೂಪಿಸಲಿ ಎಂದು ಲಿಯೋ ಹೇಳಿದರು. ಯುದ್ಧದ ದುರಂತವು ಸರಿಪಡಿಸಲಾಗದ ಪ್ರಪಾತವಾಗುವ ಮೊದಲು ಅದನ್ನು ನಿಲ್ಲಿಸುವ ನೈತಿಕ ಜವಾಬ್ದಾರಿ ಅಂತಾರಾಷ್ಟ್ರೀಯ ಸಮುದಾಯದ ಪ್ರತಿಯೊಬ್ಬ ಸದಸ್ಯರಿಗೂ ಇದೆ ಎಂದು ಲಿಯೋ ಹೇಳಿದ್ದಾರೆ.







