ಹಿಂದಿಯಲ್ಲಿ ಮಾತನಾಡಿ ಗಮನ ಸೆಳೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕ

ಕೊನಾನ್ ಒಬ್ರಿಯಾನ್ PC: x.com/WIONews
ಲಾಸ್ ಏಂಜಲೀಸ್: ಹಾಲಿವುಡ್ ನ ಅತ್ಯಂತ ಪ್ರತಿಷ್ಠಿತ ಸಮಾರಂಭ ಎನಿಸಿದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮುಂಜಾನೆ) ಆರಂಭವಾಗಿದ್ದು, ವಿಶ್ವಾದ್ಯಂತ ಕಾತರದಿಂದ ವೀಕ್ಷಿಸುತ್ತಿರುವ ಚಿತ್ರ ಪ್ರೇಮಿಗಳನ್ನು ತಲುಪುವ ನಿಟ್ಟಿನಲ್ಲಿ ನಿರೂಪಕ ಕೊನಾನ್ ಒಬ್ರಿಯಾನ್ ಸ್ಪ್ಯಾನಿಷ್, ಹಿಂದಿ ಮತ್ತು ಮ್ಯಾಂಡ್ರಿಯನ್ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು.
ಬಹುಶಃ ಭಾರತದ ಜನ ಬೆಳಿಗ್ಗೆ ಉಪಹಾರ ಸೇವಿಸುತ್ತಾ ಈ ಕಾರ್ಯಕ್ರಮ ವೀಕ್ಷಿಸುತ್ತಿರಬೇಕು ಎಂದು ಒಬ್ರಿಯಾನ್ ನುಡಿದರು. ಚೀನಾದ ಚಲನಚಿತ್ರಗಳಲ್ಲಿ ತಮಗೆ ಅವಕಾಶ ನೀಡುವ ಮೂಲಕ 'ಹಣಕಾಸು ನೆರವು' ಒದಗಿಸುವಂತೆ ಚೀನಾಗೆ ಮನವಿ ಮಾಡಿಕೊಂಡರು.
ಆಸ್ಕರ್ ಪ್ರಶಸ್ತಿಯ ವಿವರಗಳು ಈ ಕೆಳಗಿನಂತಿವೆ:
ಅತ್ಯುತ್ತಮ ಆ್ಯನಿಮೇಟೆಡ್ ಫೀಚರ್ ಫಿಲ್ಮ್: ಫ್ಲೋ (ಲ್ಯಾಟಿನ್ ಭಾಷೆ)
ಅತ್ಯುತ್ತಮ ಆ್ಯನಿಮೇಟೆಡ್ ಕಿರುಚಿತ್ರ: ಶ್ಯಾಡೊ ಆಫ್ ಕ್ರಿಪ್ರೆಸ್
ಉತ್ತಮ ಪ್ರಸಾದನ: ಪಾಲ್ ತಝೆವೆಲ್ (ವಿಕೆಡ್ ಚಿತ್ರಕ್ಕಾಗಿ)
ಉತ್ತಮ ಮೂಲ ಚಿತ್ರಕಥೆ: ಸಿಯನ್ ಬೇಕರ್ (ಅನೋರಾ)
ಉತ್ತಮ ಸ್ವೀಕೃತ ಚಿತ್ರಕಥೆ: ಪೀಟರ್ ಸ್ಟ್ರೋಹಾನ್ (ಕನ್ಕ್ಲೇವ್)
ಉತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಸಬ್ಸ್ಟ್ಯಾನ್ಸ್
ಉತ್ತಮ ಸಂಕಲನ: ಅನೋರಾ
ಉತ್ತಮ ಪೋಷಕ ನಟಿ: ಝೋಯ್ ಸಲ್ಡಾನಾ (ಎಮಿಲಿಯಾ ಪೆರೆಝ್)