ಪಾಸ್ ಪೋರ್ಟ್ ಗಳಲ್ಲಿ ಅಧ್ಯಕ್ಷ ಟ್ರಂಪ್ ಚಿತ್ರ: ವಿರೋಧ ಪಕ್ಷಗಳ ಖಂಡನೆ

Photo Credit: @WhiteHouse
ವಾಶಿಂಗ್ಟನ್, ಎ.29: ಅಮೆರಿಕದಲ್ಲಿ ಸೀಮಿತ ಆವೃತ್ತಿಯ ಪಾಸ್ ಪೋರ್ಟ್ ಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೋಟೋವನ್ನು ಅಳವಡಿಸುವ ವಿದೇಶಾಂಗ ಇಲಾಖೆಯ ನಿರ್ಧಾರವನ್ನು ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಅಮೆರಿಕದ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವವನ್ನು ಗುರುತಿಸುವ ಭಾಗವಾಗಿ ಸೀಮಿತ ಆವೃತ್ತಿಯ ಪಾಸ್ಪೋರ್ಟ್ಗಳು ಅಧ್ಯಕ್ಷ ಟ್ರಂಪ್ ಅವರ ಫೋಟೋವನ್ನು ಹೊಂದಲಿವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್ ತಿಳಿಸಿದ್ದಾರೆ. ವಿದೇಶಾಂಗ ಇಲಾಖೆಯು ಸಾಮಾಜಿಕ ಮಾಧ್ಯಮದಲ್ಲಿ ಪಾಸ್ಪೋರ್ಟ್ನ ಮಾದರಿಯನ್ನು ಪೋಸ್ಟ್ ಮಾಡಿದ್ದು, ಇದು ಜುಲೈ 4, 1776ರ ಸ್ವಾತಂತ್ರ್ಯ ಘೋಷಣೆಯ ಮೇಲ್ಭಾಗದಲ್ಲಿ ಟ್ರಂಪ್ ಅವರ ಚಿತ್ರ ಹಾಗೂ ಅದರ ಕೆಳಗೆ ಚಿನ್ನದಲ್ಲಿ ಅವರ ಸಹಿಯನ್ನು ಹೊಂದಿದೆ.
ಟ್ರಂಪ್ ಪಾಸ್ ಪೋರ್ಟ್ನಲ್ಲಿ ಕಾಣಿಸಿಕೊಂಡ ಮೊದಲ ಹಾಲಿ ಅಮೆರಿಕ ಅಧ್ಯಕ್ಷರಾಗಿದ್ದಾರೆ.
Next Story




