ಇಸ್ರೇಲ್–ಫೆಲೆಸ್ತೀನ್ ವಿಚಾರದಲ್ಲಿ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿ: ಅಮೆರಿಕಕ್ಕೆ ಅಬ್ದುಲ್ ಅಲ್-ಸಯ್ಯದ್ ಕರೆ

Photo: wakilahmad234
ವಾಷಿಂಗ್ಟನ್: ಮಿಶಿಗನ್ ನಿಂದ ಡೆಮಾಕ್ರಟಿಕ್ ಸೆನೆಟರ್ ಆಗಿ ಆಯ್ಕೆಯಾಗಿರುವ ಅಬ್ದುಲ್ ಅಲ್-ಸಯ್ಯದ್, ಇಸ್ರೇಲ್–ಫೆಲೆಸ್ತೀನ್ ವಿಚಾರದಲ್ಲಿ ಅಮೆರಿಕವು ಪ್ರಜಾಪ್ರಭುತ್ವದ ತತ್ವಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ರವಿವಾರ NBC ವಾಹಿನಿಯ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಜಗತ್ತಿನ ಏಕೈಕ ಯಹೂದಿ ರಾಷ್ಟ್ರ'ವಾಗಿರುವ ಇಸ್ರೇಲ್ ತನ್ನ ಅಸ್ತಿತ್ವವನ್ನು ತ್ಯಜಿಸಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪವಿತ್ರ ಭೂಮಿಯಲ್ಲಿ ತಲೆಮಾರುಗಳಿಂದ ನೆಲೆಸಿರುವ ಫೆಲೆಸ್ತೀನಿಯರು ತಮ್ಮದೇ ಆದ ಪ್ರತ್ಯೇಕ ರಾಷ್ಟ್ರ ಹೊಂದುವ ಭರವಸೆ ಪಡೆದಿದ್ದರು. ಆದರೆ, ಇಸ್ರೇಲ್ ತನ್ನ ಪ್ರದೇಶವನ್ನು ವಿಸ್ತರಿಸುತ್ತಿರುವುದನ್ನು ಅವರು ನೋಡುತ್ತಿದ್ದಾರೆ. ಇದಕ್ಕೆ ಅಮೆರಿಕವೂ ಬೆಂಬಲ ನೀಡುತ್ತಿದೆ ಎಂದು ಅಲ್-ಸಯ್ಯದ್ ಆರೋಪಿಸಿದರು.
ಅಮೆರಿಕವು ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದ ಅವರು, ಪ್ರಜಾಪ್ರಭುತ್ವ ಮತ್ತು ನ್ಯಾಯದ ತತ್ವಗಳ ಜತೆಗೆ ಸಮಾನ ಹಕ್ಕುಗಳು, ಶಾಂತಿ, ಘನತೆ ಹಾಗೂ ಸ್ವಯಂ ನಿರ್ಧಾರದ ಹಕ್ಕಿನ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿರಬೇಕು ಎಂದರು.
ಈ ತತ್ವಗಳು ಫೆಲೆಸ್ತೀನಿಯರು ಮತ್ತು ಯಹೂದಿ ಇಸ್ರೇಲಿಗಳಿಬ್ಬರಿಗೂ ಅನ್ವಯಿಸುತ್ತವೆ. ಇದು ಯಾವುದೇ ನಿರ್ದಿಷ್ಟ ಸಮುದಾಯದ ಜನರ ವಿರುದ್ಧದ ನಿಲುವಲ್ಲ ಎಂದು ಅವರು ಸ್ಪಷ್ಟಪಡಿಸಿದರು.





