Dominican Republic|ಖಾಸಗಿ ಜೆಟ್ ಪತನ: ಪೈಲಟ್, ಸಹ ಪೈಲಟ್ ಮೃತ್ಯು

Screengrab: X
ಸ್ಯಾಂಟೊ ಡೊಮಿಂಗೊ: ಬೇಸ್ ಬಾಲ್ ದಂತಕತೆ ಯಾದಿಯೆರ್ ಮೊಲಿನಾ ಮಾಲಕತ್ವದ ಖಾಸಗಿ ಜೆಟ್ ಒಂದು ಭೂಸ್ಪರ್ಶ ಮಾಡುವ ವೇಳೆ ಪತನಗೊಂಡು, ಪೈಲಟ್ ಹಾಗೂ ಸಹ ಪೈಲಟ್ ಇಬ್ಬರೂ ಮೃತಪಟ್ಟಿರುವ ಘಟನೆ ರವಿವಾರ ಪೂರ್ವ ಡೊಮಿನಿಕನ್ ರಿಪಬ್ಲಿಕ್ ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪೈಲಟ್ ಗಳಿಬ್ಬರೂ ಅಮೆರಿಕ ಪ್ರಜೆಗಳು ಎಂದು ಡೊಮಿನಿಕನ್ ನಾಗರಿಕ ವಿಮಾನ ಯಾನ ಸಂಸ್ಥೆ ತಿಳಿಸಿದೆ.
ಈ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ಡೊಮಿನಿಕನ್ ನಾಗರಿಕ ವಿಮಾನ ಯಾನ ಸಂಸ್ಥೆ ಹೇಳಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಾ ರೊಮಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ದಟ್ಟ ಹೊಗೆ ವ್ಯಾಪಿಸಿರುವುದು ಹಾಗೂ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ವಾಹನಗಳು ನೀರನ್ನು ಚಿಮುಕಿಸುತ್ತಿರುವುದು ಕಂಡು ಬಂದಿದೆ.
ನೈರುತ್ಯ ಲಾ ರೊಮಾನದಿಂದ ಅಂದಾಜು 16 ನಾಟಿಕಲ್ ಮೈಲುಗಳು (30 ಕಿಮೀ) ಇದ್ದಾಗ, ವಿಮಾನವು ತುರ್ತು ಸ್ಥಿತಿಯನ್ನು ಘೋಷಿಸಿತು ಹಾಗೂ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ಯತ್ನಿಸುವಾಗ ಪತನಗೊಂಡಿತು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಮಾರು 18 ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿದ್ದ ಗಲ್ಫ್ ಸ್ಟ್ರೀಮ್ ಜಿ200 ಖಾಸಗಿ ಜೆಟ್ ವಿಮಾನದ ಪತನಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
A Gulfstream G200, N318JF, crashed during an emergency landing at La Romana Airport, Dominican Republic.
— Aviation Safety Network (ASN) (@AviationSafety) June 8, 2026
Both pilots perished.pic.twitter.com/jaVW8u8Ze7






