ಪ್ರಮುಖ ಬಲೂಚ್ ಹೋರಾಟಗಾರ್ತಿ ಮಾಹ್ರಾಂಗ್ ಬಲೂಚ್ ಗೆ ಜೀವಾವಧಿ ಶಿಕ್ಷೆ

ಮಾಹ್ರಾಂಗ್ ಬಲೂಚ್ | Photo Credit : NDTV
ಪೇಷಾವರ, ಜೂ.22: ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಭದ್ರತಾ ಅಧಿಕಾರಿಯೊಬ್ಬರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಬಲೂಚ್ ಹಕ್ಕುಗಳ ಹೋರಾಟಗಾರ್ತಿ ಡಾ. ಮಾಹ್ರಾಂಗ್ ಬಲೂಚ್ ಮತ್ತು ಮತ್ತೊಬ್ಬ ಯುವ ನಾಯಕನಿಗೆ ಭಯೋತ್ಪಾದನಾ ನಿರೋಧಕ ನ್ಯಾಯಾಲಯ (ಎಟಿಸಿ) ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಲೂಚ್ ಯಕ್ಜೆಹ್ತಿ ಸಮಿತಿ (ಬಿವೈಸಿ) ಮುಖ್ಯಸ್ಥೆ ಮಾಹ್ರಾಂಗ್ ಮತ್ತು ಅವರ ಸಹಚರ ಸಿಬ್ಘಾತುಲ್ಲಾ ಶಾಗೆ ಎಟಿಸಿ ಈ ಶಿಕ್ಷೆಯನ್ನು ಪ್ರಕಟಿಸಿದೆ. ಪ್ರಸ್ತುತ ಕ್ವೆಟ್ಟಾ ಜಿಲ್ಲಾ ಜೈಲಿನಲ್ಲಿ ಬಂಧಿಯಾಗಿರುವ ಇವರಿಬ್ಬರು ಆನ್ಲೈನ್ ವಿಡಿಯೊ ಲಿಂಕ್ ಮೂಲಕ ವಿಚಾರಣೆಯನ್ನು ಎದುರಿಸಿದ್ದರು.
ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಮತ್ತು ಭದ್ರತಾ ಅಧಿಕಾರಿಯ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರು ಎಂಬುದನ್ನು ಪರಿಗಣಿಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯನ್ನು ಅವರ ಪರ ವಕೀಲರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
Next Story




