ಪರಮಾಣು ಶಸ್ತ್ರಾಸ್ತ್ರ ಮಿತಿಯನ್ನು ಮತ್ತೊಂದು ವರ್ಷ ವಿಸ್ತರಿಸಿದ ರಶ್ಯ ಅಧ್ಯಕ್ಷ ಪುಟಿನ್

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ, ಸೆ.22: ಪರಮಾಣು ಶಸ್ತ್ರಾಸ್ತ್ರ ಮಿತಿಗಳನ್ನು ಸ್ವಯಂಪ್ರೇರಿತವಾಗಿ ಇನ್ನೂ ಒಂದು ವರ್ಷ ವಿಸ್ತರಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಘೋಷಿಸಿದ್ದಾರೆ.
ಅಮೆರಿಕಾದೊಂದಿಗಿನ ಒಪ್ಪಂದದ ಅವಧಿ ಮುಗಿದ ಬಳಿಕವೂ ಒಪ್ಪಂದವನ್ನು ವಿಸ್ತರಿಸಲಾಗುವುದು. ಅಮೆರಿಕಾವೂ ಇದೇ ರೀತಿಯ ಕ್ರಮ ಕೈಗೊಳ್ಳುವುದೆಂದು ನಿರೀಕ್ಷಿಸುವುದಾಗಿ ರಶ್ಯ ಅಧ್ಯಕ್ಷರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಉದ್ವಿಗ್ನತೆ ಹೆಚ್ಚಿಸುವಲ್ಲಿ ಅಥವಾ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ರಶ್ಯಕ್ಕೆ ಆಸಕ್ತಿಯಿಲ್ಲ ಎಂದು ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಪುಟಿನ್ ಹೇಳಿದ್ದಾರೆ.
ಕಾರ್ಯತಂತ್ರದ ಶಸ್ತ್ರಾಸ್ತ್ರ ಕಡಿತ ಒಪ್ಪಂದ(ಸ್ಟಾರ್ಟ್)ದಲ್ಲಿ ಪಾಲ್ಗೊಳ್ಳುವುದನ್ನು ಪುಟಿನ್ 2023ರಲ್ಲಿ ಅಮಾನತುಗೊಳಿಸಿದ್ದರು. ಆದರೂ ಒಪ್ಪಂದದ ಅವಧಿ ಮುಕ್ತಾಯದವರೆಗೂ ರಶ್ಯ ಒಪ್ಪಂದದ ಅಂಶಗಳನ್ನು ಪಾಲಿಸುವುದಾಗಿ ಹೇಳಿದ್ದರು.
Next Story





