ಇರಾನ್ ಯುದ್ಧದ ಹಾನಿಕಾರಕ ಪರಿಣಾಮಗಳ ಬಗ್ಗೆ ಟ್ರಂಪ್ಗೆ ಪುಟಿನ್ ಎಚ್ಚರಿಕೆ: ವರದಿ

ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ | Photo Credit : AP , PTI
ಮಾಸ್ಕೊ, ಎ.30: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ಇರಾನ್ ವಿರುದ್ಧದ ಮಿಲಿಟರಿ ಕ್ರಮಗಳನ್ನು ಅಮೆರಿಕ ಮತ್ತು ಇಸ್ರೇಲ್ ಮುಂದುವರಿಸಿದರೆ ಅನಿವಾರ್ಯ ಮತ್ತು ಅತ್ಯಂತ ಹಾನಿಕಾರಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಉಭಯ ನಾಯಕರ ನಡುವಿನ ಸುಮಾರು 90 ನಿಮಿಷದ ಮಾತುಕತೆ ಮಧ್ಯಪ್ರಾಚ್ಯದ ಬಗ್ಗೆ, ವಿಶೇಷವಾಗಿ ಇರಾನ್ ಒಳಗೊಂಡ ಪರಿಸ್ಥಿತಿಯ ಬಗ್ಗೆ ಕೇಂದ್ರೀಕೃತವಾಗಿತ್ತು. ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಟ್ರಂಪ್ ಅವರ ನಿರ್ಧಾರವು ಪ್ರದೇಶದ ಸ್ಥಿರತೆಗೆ ನೆರವಾಗುವ ಜೊತೆಗೆ ಮಾತುಕತೆಗೆ ಅವಕಾಶ ಒದಗಿಸುತ್ತದೆ ಎಂದು ಪುಟಿನ್ ಸ್ವಾಗತಿಸಿರುವುದಾಗಿ ರಷ್ಯಾ ಅಧ್ಯಕ್ಷರ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story




