ತೆರೆದ ಖತರ್ ವಾಯುಪ್ರದೇಶ; ವಿಮಾನ ಸಂಚಾರ ಪುನರಾರಂಭ

PC: x.com/Qatar_Tribune
ದೋಹಾ: ದೇಶದ ವಾಯುಪ್ರದೇಶವನ್ನು ತೆರೆದ ನಂತರ ತನ್ನ ವಿಮಾನಗಳ ಸಂಚಾರ ಪುನರಾರಂಭಿಸಲಾಗಿದೆ ಎಂದು ಖತರ್ ಏರ್ ವೇಸ್ ಹೇಳಿದೆ ಎಂದು Aljazeera ವರದಿ ಮಾಡಿದೆ.
ಖತರ್ ನಲ್ಲಿರುವ ಅಮೆರಿಕದ ವಾಯು ನೆಲೆಯಾದ, ಅಲ್ ಉದೈದ್ ವಾಯುನೆಲೆಯ ಮೇಲೆ ಇರಾನ್ ದಾಳಿ ನಡೆಸುತ್ತಿದ್ದಂತೆ ಖತರ್ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಆ ಬಳಿಕ ಖತರ್ ಏರ್ ವೇಸ್ ನ ಹಲವಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು.
"ಈ ಸಮಯದಲ್ಲಿ ನಮ್ಮ ಪ್ರಯಾಣಿಕರು ಮನೆಗೆ ಮರಳಲು, ಅವರ ಮುಂದಿನ ಪ್ರಯಾಣವನ್ನು ಸುರಕ್ಷಿತವಾಗಿ ಮತ್ತು ಸರಾಗವಾಗಿ ತಲುಪಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ" ಎಂದು ಖತರ್ ಏರ್ ವೇಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಕಾರ್ಯಾಚರಣೆಗಳು ಪುನರಾರಂಭಗೊಳ್ಳುತ್ತಿದ್ದಂತೆ, ನಮ್ಮ ವಿಮಾನದ ವೇಳಾಪಟ್ಟಿಯಲ್ಲಿ ವಿಳಂಬವಾಗಬಹುದು. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ವೆಬ್ ಸೈಟ್ ಪರಿಶೀಲಿಸಬಹುದು" ಎಂದು ಅದು ಹೇಳಿದೆ.
Next Story





