ಸಂಸ್ಕರಣಾಗಾರಗಳ ಮೇಲಿನ ದಾಳಿ ತಡೆಯಲು ಸಿದ್ಧ: ಝೆಲೆನ್ಸ್ಕಿ

ಝೆಲೆನ್ಸ್ಕಿ | PTI
ಕೀವ್, ಅ. 11: ಉಕ್ರೇನ್ ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ರಶ್ಯ ನಿಲ್ಲಿಸಿದರೆ, ರಶ್ಯದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಉಕ್ರೇನ್ ಕೂಡ ಸಿದ್ಧವಾಗಿದೆ ಎಂದು ಝೆಲೆನ್ಸ್ಕಿ ರವಿವಾರ ತಿಳಿಸಿದ್ದಾರೆ.
‘ರಶ್ಯ ನಮ್ಮ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಿದರೆ, ರಶ್ಯದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಉಕ್ರೇನ್ ಸಿದ್ಧವಾಗಲಿದೆ. ಯಾವುದೇ ಉದ್ವಿಗ್ನತೆ ಶಮನಗೊಳಿಸುವ ಕ್ರಮಗಳು ಪರಸ್ಪರವಾಗಿರಬೇಕು ಮತ್ತು ನೈಜ ಭರವಸೆಗಳ ಬೆಂಬಲವನ್ನು ಹೊಂದಿರಬೇಕು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಉಕ್ರೇನ್ನ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ, ‘ದೇಶದ ಸ್ವಾತಂತ್ರ್ಯದ ಯುದ್ಧದಲ್ಲಿ ಝೆಲೆನ್ಸ್ಕಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಉಕ್ರೇನ್ ಜನರ ಬೆಂಬಲವಿದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಜನರಿಗಿದೆ. ವಿದೇಶಗಳಿಂದ ಬರುವ ಹೇಳಿಕೆಗಳು ಝೆಲೆನ್ಸ್ಕಿ ಅವರ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.




