ಇರಾನ್ನ ಹಕ್ಕುಗಳನ್ನು `ರಕ್ಷಿಸಲು' ಸಿದ್ಧ: ಚೀನಾ ಹೇಳಿಕೆ

ವಾಂಗ್ ಯಿ | Photo Credit : AP
ಬೀಜಿಂಗ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಲು ಚೀನಾ ಬಯಸುತ್ತಿದೆ ಎಂಬ ವರದಿಗಳ ನಡುವೆಯೇ, ಇರಾನ್ನ ಹಕ್ಕುಗಳನ್ನು ರಕ್ಷಿಸಲು ಚೀನಾ ಸಿದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಬುಧವಾರ ಬೀಜಿಂಗ್ನಲ್ಲಿ ಭೇಟಿಯಾದ ವಾಂಗ್ `ಇರಾನ್ನೊಂದಿಗೆ ಸಂವಾದ ಮತ್ತು ಸಹಕಾರವನ್ನು ಬಲಪಡಿಸಲು ಹಾಗೂ ಇರಾನ್ನ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಚೀನಾ ಸಿದ್ಧವಾಗಿದೆ. ಇರಾನ್ ಮತ್ತು ಅಮೆರಿಕ ಸಮಾಧಾನದಿಂದ ಹಾಗೂ ಸಂಯಮದಿಂದ ಇರುವಂತೆ ನಾವು ಪ್ರೋತ್ಸಾಹಿಸುತ್ತೇವೆ' ಎಂದು ಹೇಳಿದರು.
`ಪ್ರಾದೇಶಿಕ ಉದ್ವಿಗ್ನತೆಯು ಯಮನ್ ಮತ್ತು ಕೆಂಪು ಸಮುದ್ರಕ್ಕೆ ಹರಡುವುದನ್ನು ನೋಡಲು ನಾವು ಬಯಸುವುದಿಲ್ಲ' ಎಂದು ವಾಂಗ್ ಹೇಳಿದರು. ಇರಾನ್ನ ಪ್ರಮುಖ ಆರ್ಥಿಕ ಭಾಗಿದಾರನಾಗಿರುವ ಚೀನಾ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷವನ್ನು ಶಾಂತಗೊಳಿಸಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ.




