ಫುಕುಷಿಮ ಸ್ಥಾವರದಿಂದ ವಿಕಿರಣಶೀಲ ನೀರು ಸಮುದ್ರಕ್ಕೆ ಬಿಡುಗಡೆ
ಚೀನಾದಿಂದ ತೀವ್ರ ಪ್ರತಿರೋಧ

ಟೋಕಿಯೊ: ದುರ್ಬಲಗೊಂಡ ಫುಕುಷಿಮ ಅಣುವಿದ್ಯುತ್ ಸ್ಥಾವರದಿಂದ ಸಂಸ್ಕರಿಸಿದ ವಿಕಿರಣಶೀಲ ನೀರನ್ನು ಸಮುದ್ರಕ್ಕೆ ಬಿಡುವುದಕ್ಕೆ ಸಂಬಂಧಿ
ಸಿದ ಅಂತಿಮ ಕಾನೂನು ಪ್ರಕ್ರಿಯೆಯನ್ನು ಜಪಾನ್ ಶುಕ್ರವಾರ ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಆದರೆ ವಿಕಿರಣಶೀಲ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳಿಗೂ ಜಪಾನ್ ಹೊಣೆಯಾಗಿದೆ ಎಂದು ಚೀನಾ ಕಟು ಎಚ್ಚರಿಕೆ ನೀಡಿದೆ.
ಈ ಮಧ್ಯೆ, ಸಮುದ್ರಕ್ಕೆ ಸಂಸ್ಕರಿಸಿದ ವಿಕಿರಣ ಶೀಲ ನೀರನ್ನು ಬಿಡುವ ಜಪಾನ್ ಕೋರಿಕೆಯನ್ನು ಪರಿಶೀಲಿಸಿದ ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿ ‘ಅಂತರ್ರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ)’ಯ 11 ಸದಸ್ಯರ ತಂಡ ನೀರು ಬಿಡುಗಡೆಗೆ ಸಮ್ಮತಿ ಸೂಚಿಸಿದ್ದರೂ ಇದು ಸರ್ವಾನುಮತದ ನಿರ್ಧಾರ ಆಗಿರಲಿಲ್ಲ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.
ಸುಮಾರು 1 ದಶಕದ ಹಿಂದೆ ಸಂಭವಿಸಿದ ತ್ಸುನಾಮಿಯಲ್ಲಿ ಜಪಾನ್ನ ಫುಕುಷಿಮ ಅಣುಸ್ಥಾವರಕ್ಕೆ ತೀವ್ರ ಹಾನಿಯಾಗಿತ್ತು. ಅಂತರ್ಜಲ, ಮಳೆನೀರು ಮತ್ತು ಸ್ಥಾವರ ತಂಪಾಗಿಸಲು ಬಳಸಿದ ಸುಮಾರು 1.3 ದಶಲಕ್ಷ ಘನಮೀಟರ್ ನೀರು ಸ್ಥಾವರದಲ್ಲಿ ಶೇಖರಣೆಗೊಂಡಿದೆ. ಸ್ಥಾವರದಿಂದ ಸುಮಾರು 500 (ಒಲಿಂಪಿಕ್ ಕ್ರೀಡೆಯ ಈಜುಕೊಳದ ಗಾತ್ರ) ಈಜುಕೊಳದಲ್ಲಿ ಹಿಡಿಯುವ ಪ್ರಮಾಣದಷ್ಟು ನೀರನ್ನು ಸಾಗರಕ್ಕೆ ಬಿಡುವುದಾಗಿ ಜಪಾನ್ ಘೋಷಿಸಿತ್ತು. ಜಪಾನ್ನ ಯೋಜನೆಯಿಂದ ಆಗಬಹುದಾಗ ಸಮಸ್ಯೆಯ ಬಗ್ಗೆ ಪರಿಶೀಲಿಸಲು 2021ರಲ್ಲಿ ಐಎಇಎ 11 ಸದಸ್ಯರ ತಂಡವನ್ನು ರೂಪಿಸಿತ್ತು. ಇದೀಗ ತಂಡದ ವರದಿ ಆಧರಿಸಿ ಜಪಾನ್ಗೆ ಅನುಮತಿ ನೀಡುವುದಾಗಿ ಐಎಇಎ ಘೋಷಿಸಿದೆ.