Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಲಂಡನ್ : ಡಾ. ರೊನಾಲ್ಡ್ ಕೊಲಾಸೊಗೆ...

ಲಂಡನ್ : ಡಾ. ರೊನಾಲ್ಡ್ ಕೊಲಾಸೊಗೆ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅವಾರ್ಡ್

ವಾರ್ತಾಭಾರತಿವಾರ್ತಾಭಾರತಿ26 Oct 2023 7:55 PM IST
share
ಲಂಡನ್ : ಡಾ. ರೊನಾಲ್ಡ್ ಕೊಲಾಸೊಗೆ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅವಾರ್ಡ್

ಲಂಡನ್ : ಬ್ರಿಟಿಷ್ ಸಂಸತ್ತಿನ ಪ್ರತಿಷ್ಠಿತ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗು ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (IOD) ವತಿಯಿಂದ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು.

ಕೊಲಾಸೊ ಅವರ ಅಸಾಧಾರಣ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಜಗತ್ತಿನ ವಿವಿಧೆಡೆಗಳಿಂದ ಬಂದಿದ್ದ ಗಣ್ಯರು, ಕಾರ್ಪೊರೇಟ್ ದಿಗ್ಗಜರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಲಂಡನ್ ನಗರದ ಲಾರ್ಡ್ ಮೇಯರ್, ಮಿನಿಸ್ಟರ್ ಆಫ್ ಲಂಡನ್ ಹಾಗು ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಪೌಲ್ ಸ್ಕಲ್ಲಿ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಅಧ್ಯಕ್ಷ ಲೆ. ಜ. ಸುರಿಂದರ್ ನಾಥ್, ಕಾನ್ಫೆಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿನ ಉಪಾಧ್ಯಕ್ಷ ಲಾರ್ಡ್ ಕರಣ್ ಬಿಲ್ಲಿಮೋರಿಯ, ಹೌಸ್ ಆಫ್ ಲಾರ್ಡ್ಸ್ ನ ಮಾಜಿ ಡೆಪ್ಯುಟಿ ಸ್ಪೀಕರ್ ಲಾರ್ಡ್ ಸ್ವರಾಜ್ ಪಾಲ್, ಸದ್ಗುರು ಶ್ರೀ ಮಧುಸೂಧನ್ ಸಾಯಿ, ಹಿಂದೂಜಾ ಗ್ರೂಪ್ ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ, ಯುಕೆ ನಾಮಿನೇಷನ್ ಹಾಗು ಗವರ್ನೆನ್ಸ್ ಕಮಿಟಿಯ ಅಧ್ಯಕ್ಷೆ ಶ್ರುತಿ ವಡೇರ, ಸಿಂಗಾಪುರದ ಟಿ ಐ ಡಬ್ಲ್ಯೂ ಕ್ಯಾಪಿಟಲ್ ನ ಗ್ಲೋಬಲ್ ಸಿ ಇ ಓ ಹಾಗು ಮ್ಯಾನೇಜಿಂಗ್ ಪಾರ್ಟ್ ನರ್ ಮೋಹಿತ್ ರಲ್ಹಾನ್, ಅಬುಧಾಬಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಹಾಗು ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಯುಎಇ ಅಧ್ಯಕ್ಷ ಡಾ. ತಾಯಿರ್ ಕಮಾಲಿ, ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ನವೀನ್ ಬಿ ಚಾವ್ಲ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಮಹಾ ನಿರ್ದೇಶಕ ಅಶೋಕ್ ಕಪೂರ್, ಭಾರತದ ಮಾಜಿ ಆಡಿಟರ್ ಜನರಲ್ ಶ್ರೀನಿವಾಸನ್ ಸತ್ಯಮೂರ್ತಿ, ರಾಜ್ಯಸಭೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಮತ್ತಿತರ ಗಣ್ಯರು ಈ ವಿಶೇಷ ಸಮಾರಂಭದಲ್ಲಿ ಉಪಸ್ಥಿತರಿದ್ದು ಡಾ. ರೊನಾಲ್ಡ್ ಕೊಲಾಸೊ ಅವರನ್ನು ಅಭಿನಂದಿಸಿದರು.

20ಕ್ಕೂ ಹೆಚ್ಚು ದೇಶಗಳ ಗಣ್ಯರು, ಪ್ರತಿಷ್ಠಿತ ಕಂಪೆನಿಗಳ ನಿರ್ದೇಶಕರು, ಸಿಇಒಗಳು, ಹಿರಿಯ ನಿವೃತ್ತ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಡಾ. ಕೊಲಾಸೊ ಅವರು ಕರ್ನಾಟಕ ರಾಜ್ಯದಾದ್ಯಂತ ಕಳೆದ ಮೂರು ದಶಕಗಳಲ್ಲಿ ಮಾಡಿರುವ ಹಲವಾರು ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಹಿಂದೆ ಇಂಡೋ ಯುಕೆ ಸಮ್ಮಿಟ್ 2022 ರ ಸಂದರ್ಭ ಲಂಡನ್ ನ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಅವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನೀಡಿ ಗೌರವಿಸಲಾಗಿತ್ತು.

ಲಂಡನ್ ನಗರದ ಲಾರ್ಡ್ ಮೇಯರ್, ಮಿನಿಸ್ಟರ್ ಆಫ್ ಲಂಡನ್ ಹಾಗು ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಪೌಲ್ ಸ್ಕಲ್ಲಿ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಅಧ್ಯಕ್ಷ ಲೆ. ಜ. ಸುರಿಂದರ್ ನಾಥ್ ಅವರು ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅನ್ನು ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಪ್ರದಾನ ಮಾಡಿದರು. ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ನ್ ಅಧ್ಯಕ್ಷ ಹಾಗು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಎಂ ಎನ್ ವೆಂಕಟಾಚಲಯ್ಯ ಅವರು ಪ್ರಶಸ್ತಿಯ ಪ್ರಮಾಣಪತ್ರಕ್ಕೆ ಸಹಿ ಹಾಕಿದರು.

ಡಾ. ಕೊಲಾಸೊ ಅವರು ಈ ಹಿಂದೆ ಏಷ್ಯಾ ಒನ್ ಗ್ಲೋಬಲ್ ಇಂಡಿಯನ್ ಆಫ್ ದಿ ಇಯರ್ 2022 ಪ್ರಶಸ್ತಿಗೂ ಪಾತ್ರರಾಗಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್, ಪೆಪ್ಸಿ ಸಿಇಒ ಇಂದಿರಾ ನೂಯಿ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಮತ್ತಿತರ ಗಣ್ಯರು ಈ ಹಿಂದೆ ಆ ಪ್ರಶಸ್ತಿಯನ್ನು ಪಡೆದಿದ್ದರು. ಟೈಮ್ಸ್ ನೌ ಚಾನಲ್ ಹಾಗು ಐಸಿಐಸಿಐ ಬ್ಯಾಂಕ್ ಜಂಟಿಯಾಗಿ ಡಾ. ಕೊಲಾಸೊ ಅವರಿಗೆ ಗ್ಲೋಬರ್ ಎನ್ನಾರೈ ಆಫ್ ದಿ ಇಯರ್ 2017 ಪ್ರಶಸ್ತಿ ನೀಡಿ ಗೌರವಿಸಿದ್ದರು.

ತಮ್ಮ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಡಾ. ರೊನಾಲ್ ಕೊಲಾಸೊ ಅವರು ಅಮೇರಿಕ, ಕೆನಡಾ, ಆಸ್ಟ್ರೇಲಿಯಾ, ಯುರೋಪ್ ಹಾಗು ಹಲವು ಮಧ್ಯ ಪ್ರಾಚ್ಯ ದೇಶಗಳ ಪ್ರತಿಷ್ಠಿತ ಸರಕಾರಿ ಹಾಗು ಖಾಸಗಿ ಸಂಸ್ಥೆಗಳಿಂದ 44 ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.


















share
ವಾರ್ತಾಭಾರತಿ
ವಾರ್ತಾಭಾರತಿ
Next Story
X