ಹಾರ್ಮುಝ್ ನಲ್ಲಿ ಮೀನುಗಾರಿಕಾ ದೋಣಿಯ ಮೇಲೆ ಅಮೆರಿಕದಿಂದ ಡ್ರೋನ್ ದಾಳಿ: ವರದಿ

ಸಾಂದರ್ಭಿಕ ಚಿತ್ರ
ಟೆಹರಾನ್, ನ.29: ಹಾರ್ಮುಝ್ ಜಲಸಂಧಿಯಲ್ಲಿ ಮೂವರನ್ನು ಕರೆದೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯ ಮೇಲೆ ಅಮೆರಿಕದ ಡ್ರೋನ್ ದಾಳಿ ನಡೆಸಿದೆ ಎಂದು ಇರಾನ್ ನ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ದಕ್ಷಿಣ ಇರಾನ್ ನ ಸಿರಿಕ್ ಕೌಂಟಿ ಕರಾವಳಿಯಾಚೆ ಈ ದಾಳಿ ನಡೆದಿದ್ದು, ದೋಣಿಯಲ್ಲಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ವ್ಯಕ್ತಿ ಹಾಗೂ ದೋಣಿಯ ಮಾಲೀಕ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಇರಾನ್ ಸೇನೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
Next Story




