ಅಮೆರಿಕ: ಅಧ್ಯಕ್ಷೀಯ ರೇಸ್ನಿಂದ ಹಿಂದೆ ಸರಿದ ಟಿಮ್ ಸ್ಕಾಟ್

ಟಿಮ್ ಸ್ಕಾಟ್ ( Photo: facebook.com/votetimscott )
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಹುದ್ದೆಯ ರೇಸ್ನಿಂದ ಹಿಂದಕ್ಕೆ ಸರಿದಿದ್ದೇನೆ. ಮತದಾರರು `ಈಗ ಅಲ್ಲ' ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ರಿಪಬ್ಲಿಕನ್ ಸಂಸದ ಟಿಮ್ ಸ್ಕಾಟ್ ರವಿವಾರ ಘೋಷಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಪ್ರಥಮ ಕಪ್ಪು ವರ್ಣೀಯ ಅಧ್ಯಕ್ಷನಾಗುವ ಉಮೇದಿನಲ್ಲಿದ್ದ ಸ್ಕಾಟ್, ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ 6ನೇ ಹಂತದಲ್ಲಿ ಕೇವಲ 2.5% ಮತ ಪಡೆದಿದ್ದರು. `ಮತದಾರರು ಈಗಲ್ಲ ಟಿಮ್ ಎಂದು ಸ್ಪಷ್ಟ ಸಂದೇಶ ನೀಡಿರುವುದರಿಂದ ನನ್ನ ಉಮೇದುವಾರಿಕೆಯನ್ನು ಹಿಂಪಡೆಯುತ್ತಿದ್ದೇನೆ' ಎಂದು ಟಿಮ್ ಸ್ಕಾಟ್ ಹೇಳಿರುವುದಾಗಿ `ಫಾಕ್ಸ್ ನ್ಯೂಸ್' ವರದಿ ಮಾಡಿದೆ.
Next Story





