ಬೆಂಕಿ ಬಿದ್ದ ದೋಣಿಯಲ್ಲಿದ್ದ 177 ಜನರ ರಕ್ಷಣೆ

Photo: indiatoday.in
ರೋಮ್ : ಇಟಲಿಯ ಲ್ಯಾಂಪೆಡುಸಾ ದ್ವೀಪದಿಂದ ಸಿಸಿಲಿಯ ಪೋರ್ಟೊ ಎಂಪೆಡೊಕ್ಲ್ಗೆ ಪ್ರಯಾಣಿಸುತ್ತಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ದೋಣಿಯಲ್ಲಿದ್ದ 177 ಜನರನ್ನು ಇಟಲಿಯ ಕರಾವಳಿ ಪಡೆ ರಕ್ಷಿಸಿದೆ ಎಂದು ವರದಿಯಾಗಿದೆ.
ದೋಣಿಯಲ್ಲಿ 27 ಸಿಬಂದಿಗಳು, ವಲಸಿಗರ ಸಹಿತ 177 ಮಂದಿ ಪ್ರಯಾಣಿಸುತ್ತಿದ್ದರು. ಶುಕ್ರವಾರ ರಾತ್ರಿ ದೋಣಿಯ ಇಂಜಿನ್ ಕ್ಯಾಬಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಇಳಿದ ಕರಾವಳಿ ಪಡೆ ಜಲಫಿರಂಗಿ ಬಳಸಿ ಬೆಂಕಿಯನ್ನು ನಿಯಂತ್ರಿಸಿದ ಬಳಿಕ ದೋಣಿಯಲ್ಲಿದ್ದವರನ್ನು ಮತ್ತೊಂದು ತೆಪ್ಪಕ್ಕೆ ವರ್ಗಾಯಿಸಿ ದಡ ತಲುಪಿಸಿದೆ ಎಂದು ವರದಿ ಹೇಳಿದೆ.
Next Story





