ಭಾರತದಲ್ಲಿ ರಾಯಿಟರ್ಸ್ ಅಧಿಕೃತ X ಖಾತೆಗೆ ನಿರ್ಬಂಧ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆ ರಾಯಿಟರ್ಸ್ ನ ಅಧಿಕೃತ X ಖಾತೆಯನ್ನು ಭಾರತದಲ್ಲಿ ಶನಿವಾರದಿಂದ ನಿರ್ಬಂಧಿಸಲಾಗಿದೆ. ಈ ಸಂಬಂಧ ಸರ್ಕಾರ ಅಥವಾ X ಸಂಸ್ಥೆಯಿಂದ ಯಾವುದೇ ಅಧಿಕೃತ ಘೋಷಣೆ ಈವರೆಗೆ ಬಂದಿಲ್ಲ.
X ಬಳಕೆದಾರರು ಶನಿವಾರ ಸಂಜೆ @Reuters ಖಾತೆಗೆ ಪ್ರವೇಶಿಸಲು ಯತ್ನಿಸಿದಾಗ, "ಕಾನೂನಿನ ಸೂಚನೆಯಂತೆ ಭಾರತದಲ್ಲಿ ಈ ಖಾತೆಯನ್ನು ತಡೆಹಿಡಿಯಲಾಗಿದೆ" ಎಂಬ ಸಂದೇಶವು ಬರುತ್ತಿದೆ. ಇದೇ ರೀತಿಯಲ್ಲಿ ರಾಯಿಟರ್ಸ್ ವರ್ಲ್ಡ್ ನ್ಯೂಸ್ ಖಾತೆಯ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.
ಆದರೆ, ರಾಯಿಟರ್ಸ್ ಟೆಕ್ ನ್ಯೂಸ್, ರಾಯಿಟರ್ಸ್ ಫ್ಯಾಕ್ಟ್ ಚೆಕ್, ರಾಯಿಟರ್ಸ್ ಪಿಕ್ಚರ್ಸ್, ರಾಯಿಟರ್ಸ್ ಏಷ್ಯಾ ಹಾಗೂ ರಾಯಿಟರ್ಸ್ ಚೀನಾ ಸೇರಿದಂತೆ ಸಂಸ್ಥೆಯ ಇತರ ಖಾತೆಗಳಿಗೆ ನಿರ್ಬಂಧ ಹೇರಿಲ್ಲ. ಅವುಗಳು ಭಾರತದಲ್ಲಿ ಲಭ್ಯವಿವೆ.
ಸಾಮಾಜಿಕ ಜಾಲತಾಣ ಎಕ್ಸ್ ನ ಮಾರ್ಗಸೂಚಿಗಳ ಪ್ರಕಾರ, ನ್ಯಾಯಾಲಯದ ಆದೇಶ ಅಥವಾ ಕಾನೂನಿನ ಸೂಚನೆಯೇನಾದರೂ ಇದ್ದರೆ, ಯಕವುದೇ ಖಾತೆ ವಯನ್ನು ನಿರ್ದಿಷ್ಟವಾಗಿ ಯಾವುದೇ ದೇಶದಲ್ಲೂ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಿರ್ಬಂಧಿಸಬಹುದು.
ಈ ನಿರ್ಬಂಧಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಅಥವಾ ರಾಯಿಟರ್ಸ್ ಸಂಸ್ಥೆಗಳಿಂದ ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ.