ಮೆಕ್ಸಿಕೋದ ಕಾರಾಗೃಹದಲ್ಲಿ ಗಲಭೆ | 10 ಮಂದಿ ಮೃತ್ಯು: 16 ಜನರಿಗೆ ಗಾಯ

Photo Credit: AP
ಮೆಕ್ಸಿಕೋ ಸಿಟಿ: ವಾಯವ್ಯ ಮೆಕ್ಸಿಕೋದ ಹಿಂಸಾಚಾರ ಪೀಡಿತ ಸಿನ್ಲೋವಾ ರಾಜ್ಯದ ಬಂದರು ನಗರವಾದ ಮಜಟ್ಲಾನ್ನ `ಎಲ್ ಕ್ಯಾಸ್ಟಿಲೊ' ಕಾರಾಗೃಹದಲ್ಲಿ ಗುರುವಾರ ಕುಟುಂಬಸ್ಥರ ಭೇಟಿಯ ಸಮಯದಲ್ಲಿ ಭೀಕರ ಗಲಭೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ 9 ಕೈದಿಗಳು ಮತ್ತು ಒಬ್ಬ ಕುಟುಂಬದ ಸದಸ್ಯ ಮೃತಪಟ್ಟಿದ್ದಾರೆ. ಗಾಯಗೊಂಡ 16 ಕೈದಿಗಳನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಸಿನ್ಲೋವಾದ ಸಾರ್ವಜನಿಕ ಭದ್ರತಾ ಸಚಿವಾಲಯವು `ಎಕ್ಸ್' ನಲ್ಲಿ ಮಾಹಿತಿ ನೀಡಿದೆ.
ಘಟನೆ ಸಮಯದಲ್ಲಿ ಕೈದಿಗಳು ಬಂದೂಕುಗಳನ್ನು ಬಳಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘರ್ಷಣೆಯ ನಂತರ, ಪರಿಸ್ಥಿತಿಯನ್ನು ಹತೋಟಿಗೆ ತರಲು ಸೇನೆ, ನ್ಯಾಷನಲ್ ಗಾರ್ಡ್, ನೌಕಾಪಡೆ ಮತ್ತು ರಾಜ್ಯ ಭದ್ರತಾ ಪಡೆಗಳ ಸಿಬ್ಬಂದಿ ಕಾರಾಗೃಹವನ್ನು ಪ್ರವೇಶಿಸಿದರು. 1,800 ಕೈದಿಗಳನ್ನು ಹೊಂದಿರುವ ಈ ಕಾರಾಗೃಹವು ಈಗ ನಿಯಂತ್ರಣದಲ್ಲಿದೆ ಎಂದು ಮೆಕ್ಸಿಕೋದ ಫೆಡರಲ್ ಭದ್ರತಾ ಸಂಪುಟ ಹೇಳಿದೆ.
Next Story




