ಆಸ್ಕರ್ ವಿಜೇತ 'ಕ್ರಮೆರ್ ವರ್ಸಸ್ ಕ್ರಮೆರ್' ಚಿತ್ರ ನಿರ್ದೇಶಕ ರಾಬರ್ಟ್ ಬೆಂಟನ್ ನಿಧನ

PC | timesofindia
ಅಮೇರಿಕಾ : ಹಾಲಿವುಡ್ ಕಥಾನಕ ಶೈಲಿಯನ್ನೇ ಬದಲಿಸಿದ ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ ರಾಬರ್ಟ್ ಬೆಂಟನ್ ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
"ಬೋನಿ ಅಂಡ್ ಕ್ಲೈಡ್', 'ಕ್ರಮೆರ್ ವರ್ಸಸ್ ಕ್ರಮೆರ್', ಮತ್ತು 'ಪ್ಲೇಸಸ್ ಇನ್ ದ ಹರ್ಟ್' ಚಿತ್ರಗಳ ಮೂಲಕ ಜನಮನ್ನಣೆ ಪಡೆದ ಬೆಂಟನ್, ಆಧುನಿಕ ಅಮೆರಿಕನ್ ಸಿನಿಮಾ ರೂಪುಗೊಳಿಸಿದ ವಿಶಿಷ್ಟ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.
ಮ್ಯಾನ್ಹಾಟನ್ನಲ್ಲಿರುವ ಅವರ ನಿವಾಸದಲ್ಲಿ ವಯೋಸಹಜ ಅಸ್ವಸ್ಥತೆ ಕಾರಣದಿಂದ ಅವರು ಭಾನುವಾರ ಮೃತಪಟ್ಟಿದ್ದಾಗಿ ಮಗ ಜಾನ್ ಬೆಂಟನ್ ಹೇಳಿಕೆಯನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.
1967ರಲ್ಲಿ ಬೋನಿ ಅಂಡ್ ಕ್ಲೈಡ್ ಚಿತ್ರದ ಮೂಲಕ ಚಿತ್ರರಂಗಕ್ಕೆ ತೆರೆದುಕೊಂಡ ಬೆಂಟನ್, ಡೇವಿಡ್ ನ್ಯೂಮನ್ ಜತೆಗೆ ಇದರ ಚಿತ್ರಕಥೆ ರಚಿಸಿದ್ದರು. ಇದು ನವ ಹಾಲಿವುಡ್ ಯುಗದ ಆರಂಭಕ್ಕೆ ನಾಂದಿ ಹಾಡಿದ್ದು, ಚಿತ್ರೋದ್ಯಮದಲ್ಲಿ ಹೊಸ ಕ್ರಿಯಾಶೀಲ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟಿತು.
ಇವರ 'ಕ್ರಮೆರ್ ವರ್ಸಸ್ ಕ್ರಮೆರ್' ಚಿತ್ರ ಉತ್ತಮ ನಿರ್ದೇಶಕ ಮತ್ತು ಉತ್ತಮ ಚಿತ್ರಕಥೆ ವಿಭಾಗಗಳಲ್ಲಿ ಹೀಗೆ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರ ಅತ್ಯುತ್ತಮ ಚಿತ್ರವಾಗಿಯೂ ಪ್ರಶಸ್ತಿ ಪಡೆಯಿತು.







