ಇರಾಕ್ ವಿಮಾನ ನಿಲ್ದಾಣದತ್ತ ರಾಕೆಟ್ ದಾಳಿ: ಇಬ್ಬರಿಗೆ ಗಾಯ

PC : X
ಬಗ್ದಾದ್: ಉತ್ತರ ಇರಾಕಿನ ಕಿರ್ಕುಕ್ ವಿಮಾನ ನಿಲ್ದಾಣದ ಮಿಲಿಟರಿ ವಿಭಾಗಕ್ಕೆ ಸೋಮವಾರ ತಡರಾತ್ರಿ ಎರಡು ರಾಕೆಟ್ಗಳು ಅಪ್ಪಳಿಸಿದ್ದು ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿರುವುದಾಗಿ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮತ್ತೊಂದು ರಾಕೆಟ್ ಕಿರ್ಕುಕ್ ನಗರದ ಹೊರವಲಯದಲ್ಲಿನ ಮನೆಯೊಂದರ ಮೇಲೆ ಬಿದ್ದಿದ್ದು ವ್ಯಾಪಕ ಹಾನಿ ಸಂಭವಿಸಿದೆ. ನಾಲ್ಕನೇ ರಾಕೆಟ್ ಸ್ಫೋಟಗೊಂಡಿಲ್ಲ. ಕಿರ್ಕುಕ್ ವಿಮಾನ ನಿಲ್ದಾಣದ ಮಿಲಿಟರಿ ಸೆಕ್ಟರ್ನಲ್ಲಿ ಇರಾಕ್ ಸೇನಾನೆಲೆ, ಫೆಡರಲ್ ಪೊಲೀಸ್ ಕಚೇರಿ ಮತ್ತು ಸಶಸ್ತ್ರ ಪಡೆಗಳ ನೆಲೆಯಿದೆ. ಯಾವುದೇ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





