ಪೂರ್ವ ಉಕ್ರೇನ್ ನ ಎರಡು ಗ್ರಾಮ ರಶ್ಯದ ವಶಕ್ಕೆ: ವರದಿ

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ: ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ಪ್ರಾಂತದ ಹಾಗೂ ಖಾರ್ಕಿವ್ ಪ್ರಾಂತದ ಎರಡು ಗ್ರಾಮಗಳನ್ನು ವಶಕ್ಕೆ ಪಡೆದಿರುವುದಾಗಿ ರಶ್ಯ ರವಿವಾರ ಹೇಳಿದೆ.
ಡೊನೆಟ್ಸ್ಕ್ನ ಪಿಡ್ಡುಬ್ನೆ ಗ್ರಾಮ ಮತ್ತು ಖಾರ್ಕಿವ್ನ ಸೊಬೊಲಿವ್ಕಾ ಗ್ರಾಮಗಳನ್ನು ತನ್ನ ಪಡೆ ವಶಪಡಿಸಿಕೊಂಡು ಮತ್ತಷ್ಟು ಮುನ್ನಡೆ ಸಾಧಿಸಿದೆ. ಎಪ್ರಿಲ್ ಬಳಿಕ ಸತತ ಮೂರು ತಿಂಗಳಿನಿಂದ ರಶ್ಯದ ಪಡೆಗಳು ಉಕ್ರೇನ್ನ ಭೂಪ್ರದೇಶದಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
Next Story