ಉಕ್ರೇನ್ ನಗರಗಳ ಮೇಲೆ ರಷ್ಯಾದಿಂದ ವಾಯುದಾಳಿ: ಮಕ್ಕಳು ಸೇರಿದಂತೆ 13 ಮಂದಿ ಮೃತ್ಯು, ಹಲವರಿಗೆ ಗಾಯ

Photo credit: AP
ಉಕ್ರೇನ್ : ರಷ್ಯಾ ಪಡೆಗಳು ಉಕ್ರೇನ್ ನಗರಗಳ ಮೇಲೆ 367 ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇದು ರಷ್ಯಾ- ಉಕ್ರೇನ್ ಯುದ್ಧದ ಘೋಷಣೆ ಬಳಿಕ ಇದುವರೆಗಿನ ಅತಿದೊಡ್ಡ ವೈಮಾನಿಕ ದಾಳಿಯಾಗಿದೆ ಎಂದು ಹೇಳಲಾಗಿದೆ.
ರಷ್ಯಾದ ದಾಳಿಗೆ ಜೈಟೊಮಿರ್ನಲ್ಲಿ ಮೂವರು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಕೈವ್, ಖಾರ್ಕಿವ್, ಮೈಕೊಲೈವ್, ಟೆರ್ನೋಪಿಲ್ ಮತ್ತು ಖ್ಮೆಲ್ನಿಟ್ಸ್ಕಿಯ ಮೇಲೆ ನಡೆದ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಉಕ್ರೇನ್ನ ವಾಯುಪಡೆಯು 266 ಡ್ರೋನ್ಗಳು ಮತ್ತು 45 ಕ್ಷಿಪಣಿಗಳನ್ನು ಹೊಡೆದುರುಳಿಸಿತು, ಆದರೆ ಅಪಾರ್ಟ್ಮೆಂಟ್ ಗಳು ಮತ್ತು ಮೂಲಸೌಕರ್ಯಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
Next Story





