ಅಂತರಿಕ್ಷ ನಿಲ್ದಾಣದ ನಿರ್ವಹಣೆಗಾಗಿ ಡ್ರೋನ್ ಗಳ ಉಡಾವಣಾ ತಂತ್ರಜ್ಞಾನಕ್ಕೆ ರಶ್ಯದಿಂದ ಪೇಟೆಂಟ್

ಸಾಂದರ್ಭಿಕ ಚಿತ್ರ | PTI
ಮಾಸ್ಕೊ: ಅಂತರಿಕ್ಷ ನಿಲ್ದಾಣದ ನಿರ್ವಹಣೆಗಾಗಿ ರೊಬೊಟ್ ಗಳಿಂದ ಸಜ್ಜಿತವಾದ ಡ್ರೋನ್ ವೇದಿಕೆಯಾಗಲಿರುವ ಅಂತರಿಕ್ಷ ನಿಲ್ದಾಣದಿಂದ ಉಡಾವಣೆ ಮಾಡಲಾಗುವ ಸ್ವಯಂಚಾಲಿತ ಅಂತರಿಕ್ಷ ಗಗನ ನೌಕೆ ತಂತ್ರಜ್ಞಾನಕ್ಕೆ ರಶ್ಯ ಪೇಟೆಂಟ್ ಮಾಡಿದೆ.
ಈ ತಂತ್ರಜ್ಞಾನವನ್ನು ಮೊದಲಿಗೆ ರಶ್ಯದ ಅಂತರಿಕ್ಷ ನಿಲ್ದಾಣದಲ್ಲಿ ಪರೀಕ್ಷೆ ಮಾಡುವ ಯೋಜನೆಯಿದ್ದು, ನಂತರ ಈ ತಂತ್ರಜ್ಞಾನವನ್ನು ಚಂದ್ರನ ಆವಿಷ್ಕಾರದಲ್ಲಿ ಬಳಸುವ ಉದ್ದೇಶ ಹೊಂದಲಾಗಿದೆ.
2030ರ ವೇಳೆಗೆ ರಶ್ಯ ತನ್ನ ಸ್ವಂತ ಅಂತರಿಕ್ಷ ನಿಲ್ದಾಣವನ್ನು ಹಂತಹಂತವಾಗಿ ಪರಿವರ್ತಿಸುವ ಯೋಜನೆಯನ್ನು ಖಾತರಿಗೊಳಿಸಬೇಕಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ನಡೆದ ಸಭೆಯಲ್ಲಿ ರಶ್ಯದ ಪ್ರಥಮ ಪ್ರಧಾನಿ ಡೆನಿಸ್ ಮಂತುರೋವ್ ಹೇಳಿದ್ದಾರೆ.
“ರಶ್ಯ ಅಂತರಿಕ್ಷ ನಿಲ್ದಾಣವು ತನ್ನ ನಿರ್ವಹಣೆಗಾಗಿ ರೊಬೊಟ್ ಗಳಿಂದ ಸಜ್ಜಿತವಾದ ವಿಶ್ವದ ಪ್ರಪ್ರಥಮ ಡ್ರೋನ್ ವೇದಿಕೆಯಾಗಲಿದೆ” ಎಂದು ಶುಕ್ರವಾರ ನಡೆದ ಸಭೆಯಲ್ಲಿ ಮಂತುರೋವ್ ತಿಳಿಸಿದ್ದಾರೆ.
ಅಂತರಿಕ್ಷ ವಲಯ ಸೇರಿದಂತೆ ಪ್ರಗತಿಯಲ್ಲಿರುವ ರಾಷ್ಟ್ರೀಯ ಯೋಜನೆಗಳ ಪರಿಶೀಲನೆಗಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆದ ಈ ಸಭೆಯನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಯಿತು.
“ಈ ಮಾದರಿಯನ್ನು ನಮ್ಮ ಚಂದ್ರಯಾನ ಕಾರ್ಯಕ್ರಮಗಳಿಗೆ ಅಳವಡಿಸಲು ಈ ಯೋಜನೆಯ ಪರೀಕ್ಷೆಯು ನಮಗೆ ಅವಕಾಶ ಒದಗಿಸಲಿದೆ” ಎಂದೂ ಮಂತುರೋವ್ ಹೇಳಿದ್ದಾರೆ ಎಂದು ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನೇ ಪ್ರಕಟಿಸಲು ಮಾಡಲು ಮೀಸಲಾಗಿರುವ www1.ru ಸುದ್ದಿ ಪೋರ್ಟಲ್ ವರದಿ ಮಾಡಿದೆ.







